ವಿಜಯಪುರ: ಪಟ್ಟಣದ ಕೆರೆಕೋಡಿಯಲ್ಲಿರುವ ಕೆ.ಮುನಿರಾಜು ಅವರ ಮನೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಅವರು, ಕನಕದಾಸರ ಜೀವನ ಚರಿತ್ರೆ, ಅವರ ಕೀರ್ತನೆಗಳ ಕುರಿತು ಉಪನ್ಯಾಸ ನೀಡಿದರು.ಎಂ.ವಿ.ನಾಯ್ಡು ತಂಡವರಿಂದ ಕನಕದಾಸರ ಸಂಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ಆರ್.ಮುನಿರಾಜು, ಮುನಿವೆಂಕಟರಮಣಪ್ಪ, ಜೆ.ಆರ್.ಮುನಿವೀರಣ್ಣ, ಸೂರ್ಯಪ್ರಕಾಶ್, ಕೆ.ಎಚ್.ಚಂದ್ರಶೇಖರ್, ಗಾಯಕ ನರಸಿಂಹಪ್ಪ, ಮಹಾತ್ಮಾಂಜನೇಯ, ನಾಗಯ್ಯ, ಕೆ.ಮುನಿರಾಜು, ಭಾಗ್ಯಮ್ಮ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಎಂ. ಮಂಜುನಾಥ್, ದೇವರಾಜ್, ಮನೋಹರ್, ಮಹೇಶ್, ಮುಂತಾದವರು ಇದ್ದರು.