ಬೆಂಗಳೂರು: ಕೆಪಿಸಿಸಿ ಕೇಂದ್ರ ಕಛೇರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ವತಿಯಿಂದ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಚೊಂಬು ಪ್ರದರ್ಶನದ ವಿನೂತನ ಪ್ರತಿಭಟನೆ ನಡೆಸಲಾಯಿತು.ವಿಧಾನಪರಿಷತ್ ಸದಸ್ಯರು, ಕಾರ್ಯಾ ಧ್ಯಕ್ಷರಾದ ಮಂಜುನಾಥ್ ಭಂಡಾರಿ, ಮಾಜಿ ಸಚೇತಕ ನಾರಾಯಣಸ್ವಾಮಿ, ಸೇವಾದಳ ರಾಜ್ಯ ಸಂಘಟಕರಾದ ಎಂ.ರಾಮಚಂದ್ರರವರ ನೇತೃತ್ವದಲ್ಲಿ ಸೇವಾದಳ ಮಹಿಳಾ ರಾಜ್ಯ ಸಂಘಟಕರು ಗೀರಿಜಾ ಹೂಗಾರ್ ರವರು ಸೇವಾದಳದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ರವರು ಮಾತನಾಡಿ ಬಿಜೆಪಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಜಿಲ್ಲಾ ಮಟ್ಚ ಮತ್ತು ತಾಲೂಕು ಮಟ್ಟದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ನಂತರ ಕರ್ನಾಟಕ ರಾಜ್ಯ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯವಾಗಿದೆ.
ರಾಜ್ಯದಿಂದ ಪ್ರತಿನಿಧಿಸುವ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ.
ಬಿಜೆಪಿ ಕೇಂದ್ರ ಸರ್ಕಾರ ಕಳೆದ ೧೧ವರ್ಷಗಳಿಂದ ರಾಜ್ಯಕ್ಕೆ ಬರ ಪರಿಹಾರ, ಪ್ರವಾಹ ಮತ್ತು ನೂತನ ಯೋಜನೆ ಎಲ್ಲದರಲ್ಲು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.ಸೇವಾದಳ ರಾಜ್ಯ ಸಂಘಟಕರಾದ ಎಂ.ರಾಮಚಂದ್ರರವರು ಮಾತನಾಡಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಮಾರ್ಗದರ್ಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಚೊಂಬು ಪ್ರತಿಭಟನೆ ಮಾಡಲಾಗುತ್ತಿದೆ.
ರಾಜ್ಯದಿಂದ ಪ್ರತಿವರ್ಷ ಜಿ.ಎಸ್.ಟಿ.ತೆರಿಗೆ ರೂಪದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಸಂದಾಯವಾಗುತ್ತದೆ ರಾಜ್ಯಕ್ಕೆ ನ್ಯಾಯಯುವಾಗಿ ನೀಡಬೇಕಾದ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ.ಕಳೆದ ೧೧ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ರಾಜ್ಯಕ್ಕೆ ಬಾರಿ ಅನ್ಯಾಯವಾಗಿದೆ. ೫ ಕೇಂದ್ರ ಸಚಿವರು ಮತ್ತು ೧೭ ಸಂಸದರು ಮೌನವಾಗಿದ್ದಾರೆ, ಆಂಧ್ರ ಮತ್ತು ಬಿಹಾರ ರಾಜ್ಯಕ್ಕೆ ಅನುದಾನ ಹೆಚ್ಚಿಗೆ ನೀಡಿದ್ದಾರೆ ಒಂದುಕಣ್ಣಿಗೆ ಸುಣ್ಣ, ಇನ್ನೂಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.