ರಿಯಾದ್: ಒಲಿಂಪಿಕ್ ಚಾಂಪಿಯನ್, ಚೀನದ ಜೆಂಗ್ ಕ್ವಿನ್ವೆನ್ ಅವರನ್ನು ಪರಾಭವಗೊಳಿಸಿದ ಕೊಕೊ ಗಾಫ್ ಮೊದಲ ಬಾರಿಗೆ ಡಬ್ಲು÷್ಯಟಿಎ ಫೈನಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮೆರಿಕನ್ ಆಟಗಾರ್ತಿಯ ಗೆಲುವಿನ ಅಂತರ ೩-೬, ೬-೪, ೭-೬ (೨). ನಿರ್ಣಾಯಕ ಸೆಟ್ನಲ್ಲಿ ೨-೦ ಮುನ್ನಡೆಯಿಂದ ೩-೫ಕ್ಕೆ ಕುಸಿದ ಕೊಕೊ ಗಾಫ್ಗೆ ಟೈ ಬ್ರೇಕರ್ನಲ್ಲಿ ಅದೃಷ್ಟ ಕೈ ಹಿಡಿಯಿತು.
ಇಲ್ಲಿ ಮೊದಲ ೬ ಅಂಕಗಳನ್ನು ತಮ್ಮದಾಗಿಸಿಕೊಂಡರು.
ಕೊಕೊ ಗಾಫ್ ೨೦೧೪ರ ಬಳಿಕ ಈ ಪ್ರಶಸ್ತಿ ಗೆದ್ದ ಅಮೆರಿ ಕದ ಮೊದಲ ಆಟಗಾರ್ತಿ. ಅಂದು ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆಗಿದ್ದರು. ೨೦೦೪ರಲ್ಲಿ ಮರಿಯಾ ಶರಪೋವಾ ಗೆದ್ದ ಬಳಿಕ ಈ ಪ್ರಶಸ್ತಿಯನ್ನೆತ್ತಿದ ಕಿರಿಯ ಆಟಗಾರ್ತಿಯೂ ಹೌದು. ಆ ವರ್ಷವೇ ಕೊಕೊ ಗಾಫ್ ಜನನವಾಗಿತ್ತು!. ಪ್ರಶಸ್ತಿ ಹಾದಿಯಲ್ಲಿ ಕೊಕೊ ಗಾಫ್ ವಿಶ್ವದ ಇಬ್ಬರು ಅಗ್ರಮಾನ್ಯ ಆಟಗಾರ್ತಿಯರನ್ನು ಸೋಲಿಸಿದ್ದರು. ಗಾಫ್ಗೆ ಶರಣಾದವರೆಂದರೆ ಅರಿನಾ ಸಬಲೆಂಕಾ ಮತ್ತು ಇಗಾ ಸ್ವಿಯಾಟೆಕ್.