ಬೆಂಗಳೂರು: ಇತ್ತೀಚೆಗೆ ಆನೇಕಲ್ನಲ್ಲಿ ಕಾಂಗ್ರೆಸ್ ಮುಖಂಡ ರವಿ ಎನ್ನುವ ಕೊಲೆಯಗಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಆರೋಪಿಗಳನ್ನು ಪತ್ತೆ ಮಾಡಲು ಆನೇಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ತಂಡದವರಿಗೆ ಪ್ರಮುಖ ಆರೋಪಿ ಜೆಕೆ ಅಲಿಯಾಸ್ ಕಾರ್ತಿಕ್(೩೦)ನ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹಿಡಿಯಲು ಹೋದಾಗ ಆರೋಪಿಯು ಚಾಕುವಿನಿಂದ ಪೊಲೀಸ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ರವರಿಗೆ ಚುಚ್ಚಲು ಹೋದಾಗ ಇನ್ಸ್ಪೆಕ್ಟರ್ ರವರು ಎರಡು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚನೆ ನೀಡಿದರು ಸಹ ಮತ್ತೆ ಚುಚ್ಚಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ತಿಪ್ಪೇಸ್ವಾಮಿ ಇನ್ಸ್ಪೆಕ್ಟರ್ ರವರ ಸರ್ವಿಸ್
ರಿವರ್ ನಲ್ಲಿ ಒಂದು ಗುಂಡನ್ನು ಕಾಲಿಗೆ ಹಾರಿಸಿರುತ್ತಾರೆ.
ಜೆಕೆ ಅಲಿಯಾಸ್ ಕಾರ್ತಿಕ್ ಎನ್ನುವ ಮೇಲೆ ಸುಮಾರು ನಾಲ್ಕು ಕೊಲೆಯ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು ಈತನು ಅತ್ತಿಬೆಲೆ ಆನೇಕಲ್ ಮತ್ತು ಸೂರ್ಯಾಸಿಟಿ ಪೊಲೀಸ್ ಠಾಣೆಯ ರೌಡಿ ಶೀಟರ್ ಸಹ ಆಗಿರುತ್ತಾನೆ ಎಂದು ಆನೇಕಲ್ ಡಿವೈಎಸ್ಪಿ ಮೋಹನ್ ತಿಳಿಸಿದರು.
ಆನೇಕಲ್ ಸ್ಟೇಷನ್ ವ್ಯಾಪ್ತಿಯ ಮೈಸೂರಮ್ಮ ದೊಡ್ಡಿ ಬಳಿ ಮೋಟರ್ ಸೈಕಲ್ನಲ್ಲಿ ಇಂದು ಬೆಳಿಗ್ಗೆ ಹೋಗುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿರುತ್ತದೆ, ಕೊಲೆ ಆರೋಪಿ ಜೆಕೆ ಅಲಿಯಾಸ್ ಕಾರ್ತಿಕ್ ನನ್ನು ನಾರಾಯಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿರುತ್ತದೆ.ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಭೇಟಿ ನೀಡಿರುತ್ತಾರೆ.