ಬೆAಗಳೂರು: ಸುಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ವಿಶ್ವ ಮತ್ತು ವಿಷ್ಣು ಎಂಬುವರನ್ನು ರಾಜಗೋಪಾಲ್ ನಗರ ಪೊಲೀಸರು ಬಂಧಿಸಿರುತ್ತಾರೆ.
ರಾಜಗೋಪಾಲ್ ನಗರ ಮುಖ್ಯರಸ್ತೆಯಲ್ಲಿರುವ ಕೀರ್ತಿ ಪೇಯಿಂಟ್ ಅಂಗಡಿ ಮುಂದೆ ಹೇಮಂತ್ ಕುಮಾರ್ ಮತ್ತು ಶ್ರೀನಿವಾಸ್ ಎಂಬವರು ನಡೆದು ಹೋಗುವಾಗ ಆರೋಪಿಗಳಾದ ವಿಷ್ಣು ಮತ್ತು ವಿಶ್ವ ಎಂಬವರು ಗಲಾಟೆ ಮಾಡಿಕೊಳ್ಳುತ್ತಿದ್ದರು.
ಇದನ್ನು ಗಮನಿಸಿದ ಹೇಮಂತ್ ಕುಮಾರ್ ಮತ್ತು ಶ್ರೀನಿವಾಸ್ ರವರು ತಿಳಿ ಹೇಳಲು ಹೋದಾಗ ಚಾಕುವಿನಿಂದ ಇರಿದಿರುತ್ತಾರೆ, ಪಿರಿಯಾದುದಾರರು ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ನಿನ್ನೆ ಸಂಜೆ ಈ ಘಟನೆ ವರದಿಯಾಗಿದೆ, ರಾಜಗೋಪಾಲ್ ನಗರ ಪೊಲೀಸರು ಕೊಲೆಯತ್ನ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿರುತ್ತಾರೆ.