ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಒಬ್ಬ ವ್ಯಕ್ತಿ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿದ ಘಟನೆ ವೈರಲ್ ಆಗಿದೆ. ಮೊದಲು ರೋಹಿತ್ ಶರ್ಮಾ ಬಳಿಗೆ ಓಡಿದ ಆತ, ನಂತರ ಕೊಹ್ಲಿಯನ್ನು ತಬ್ಬಿ, ಭುಜದ ಮೇಲೆ ಕೈಯಿಟ್ಟು ಮಾತನಾಡಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಹೊರಗೆ ಕರೆದೊಯ್ದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ವ್ಯಕ್ತಿಯೊಬ್ಬ ಭದ್ರತಾ ಕವಚವನ್ನು ಮುರಿದು ಮೈದಾನಕ್ಕೆ ನುಗ್ಗಿದ್ದಾನೆ. ಭಾರತ ತಂಡದ ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದಾಗ, ಏಕಾಏಕಿ ಮೈದಾನಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಕ್ಯಾಪ್ಟನ್ ರೋಹಿತ್ ಪಡೆಗೆ ಓಡಿದ್ದಾನೆ. ಆದರೆ ರೋಹಿತ್ ಕೋಪಕ್ಕೆ ಹೆದರಿದ ಆ ವ್ಯಕ್ತಿ ಕಿಂಗ್ ಕೊಹ್ಲಿಯತ್ತ ಓಡಿದ್ದಾನೆ.