ಪರ್ತ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾಪತ ತಂಡ ಅಭೂತಪೂರ್ವ ಪ್ರದರ್ಶನ ನೀಡುತ್ತಿದೆ. ಪಂದ್ಯದ 2 ದಿನ ವಿಕೆಟ್ ನಷ್ಟವಿಲ್ಲದೆ 172 ರನ್ ಗಳಿಸಿದ್ದ ಭಾರತ ತಂಡ 3 ದಿನವಾದ ಭಾನುವಾರ ದಿನವಿಡೀ ಆಸೀಸ್ ಬೌಲರ್ ಗಳನ್ನು ಗೋಳು ಹೊಯ್ದುಕೊಂಡಿತು. ಯಶಸ್ವಿ ಜೈಸ್ವಾಲ್ ಬಳಿಕ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಸಹ ಶತಕ ಬಾರಿಸಿದ್ದಾರೆ. ಅವರು ಶತಕ ಪೂರೈಸುತ್ತಿದ್ದಂತೆ ಭಾರತ 6 ವಿಕೆಟ್ ಗೆ 487 ರನ್ ಗಳಿಸಿದ್ದ ಭಾರತ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಕೊಹ್ಲಿ 30ನೇ ಶತಕ: ವಿರಾಟ್ ಕೊಹ್ಲಿ(100) ಮತ್ತು ನಿತೇಶ್ ಕುಮಾರ್ ರೆಡ್ಡಿ (38) ಅವರು ಆಸ್ಟ್ರೇಲಿಯಾ ವಿರುದ್ಧ ಪ್ರಹಾಲ ಮುಂದುವರಿಸಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಸರ್ವಾಧಿಕ 41 ರನ್ ಗಳಿಸಿದ್ದ ನಿತೇಶ್ ದ್ವಿತೀಯ ಇನ್ನಿಂಗ್ಸ್ ನಲ್ಲೂ 27 ಎಸೆತಗಳಿಂದ ಎರಡು ಸಿಕ್ಸರ್ , 3 ಬೌಂಡರಿಗಳಿದ್ 38 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಅವರು 148 ಎಸೆತಗಳಿಂದ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 100 ರನ್ ಗಳಿಸಿದರು. ವಿರಾಟ್ ಅವರು 30ನೇ ಶತಕ ಪೂರೈಸುತ್ತಿದ್ದಂತೆ ಭಾರತ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಈ ಶತಕದ ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮೀರಿ ನಿಂತರು. ಇದು ಆಸ್ತ್ರೇಲಿಯಾ ನೆಲದಲ್ಲಿ ಅವರ 7ನೇ ಶತಕವಾಗಿದೆ. ಈವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ (6) ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿ
ಕೊಂಡರು.