ಅಜಯ್ ಜಡೇಜಾ 1992-2000 ರ ನಡುವೆ ಟೀಮ್ ಇಂಡಿಯಾ ಪರ 15 ಟೆಸ್ಟ್ ಪಂದ್ಯಗಳು ಮತ್ತು 196 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 5935 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ 2023ರ ಏಕದಿನ ವಿಶ್ವಕಪ್ ವೇಳೆ ಅಫ್ಘಾನಿಸ್ತಾನ್ ತಂಡದ ಮೆಂಟರ್ ಆಗಿಯೂ ಜಡೇಜಾ ಕಾರ್ಯ ನಿರ್ವಹಿಸಿದ್ದರು.
ಭಾರತದಲ್ಲಿ ಕ್ರಿಕೆಟ್ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಲಾಭದಾಯಕ ಕ್ರೀಡೆ ಎಂಬುದರಲ್ಲಿ ಡೌಟೇ ಇಲ್ಲ. ಆದರೆ ಈ ವಾರ ಭಾರತದ ಮಾಜಿ ತಾರೆಯೊಬ್ಬರು ಟೀಮ್ ಇಂಡಿಯಾ ದಂತಕಥೆಗಳಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ನಿವ್ವಳ ಮೌಲ್ಯದಲ್ಲಿ ಹಿಂದಿಕ್ಕಿದ್ದಾರೆ ಎಂದರೆ ನಂಬಲೇಬೇಕು.
ಹೌದು, ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರ ನಿವ್ವಳ ಮೌಲ್ಯವು ಇದ್ದಕ್ಕಿದ್ದಂತೆ 1450 ಕೋಟಿ ರೂ. ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಜಾಮ್ ನಗರ ರಾಜಮನೆತನದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದು.