ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವರನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕೇಕ್ ಪಾಕೆಟ್ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಕ್ಷಿತ ರಮೇಶ್ ಮೇಲಪ್ಪನವರ್(23) ಎಂಬಾತನನ್ನು ಬಂಧಿಸಿ ಎರಡೂವರೆ ಕೋಟಿ ರೂ ಬೆಲೆ ಬಾಳುವ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
ಈತನಿಂದ ಹೈಡ್ರೋ ಗಾಂಜಾ, ಎಲ್ಎಸ್ ಡಿ ಸ್ಟ್ರಿಪ್ಸ್,, ಗಾಂಜಾ, ಚರಸ್, ಎಂ ಡಿ ಎಂ ಕ್ರಿಸ್ಟಿಲ್ಸ್, ತೂಕದ ಮಷೀನ್, ಎರಡು ಮೊಬೈಲ್ ಫೋನ್ ಮತ್ತು ಒಂದು ಲಕ್ಷ ಮೂವತ್ತು ರೂಪಾಯಿ ಕ್ಯಾಶ್ ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು 5 ಲಕ್ಷ ರೂ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡು ರಾಜೀವ್ ಎಂಬ ಆರೋಪಿಯನ್ನು ಬಂಧಿಸಿರುತ್ತಾರೆ.
ಗೋವಿಂದರಾಜನಗರ ಪೊಲೀಸರು ಸ್ವಾದಿನ್ ಮತ್ತು ಲಕ್ಷ್ಮೀನಾರಾಯಣ ಎಂಬ ಆರೋಪಿಗಳನ್ನು ಬಂಧಿಸಿ ಎರಡು ಕೆಜಿ ಗಾಂಜಾ, ರಾಜಗೋಪಾಲ್ ನಗರ ಪೊಲೀಸರು ರಾಜೀವ್ ಪ್ರಧಾನ್ ಎಂಬ ಆರೋಪಿಯನ್ನು ಬಂಧಿಸಿ 5:30ಕೆಜಿ ಗಾಂಜಾ, ಬಸವೇಶ್ವರನಗರ ಪೊಲೀಸರು ತಾಂಡವೀಶ್ವರ ಮತ್ತು ರಾಜಕುಮಾರ್ ಸಿಂಗ್ ಎಂಬ ಆರೋಪಿಗಳನ್ನು ಬಂಧಿಸಿ ಒಂದೂವರೆ ಕೆಜಿ ಗಾಂಜಾ, ವಿಜಯನಗರ ಪೊಲೀಸರು ಪ್ರೇಮ್ ಜಿತ್ ಸಿಂಗ್ ಎಂಬ ಆರೋಪಿಯನ್ನು ಬಂಧಿಸಿ ಒಂದೂವರೆಕೆಜಿ ಗಾಂಜಾ, ಜೆಜೆ ನಗರ ಪೊಲೀಸರುಆದಿಲ್ ಮತ್ತು ಅಫ್ತಾಬ್ ಎಂಬ ಆರೋಪಿಗಳನ್ನು ಬಂಧಿಸಿ 20 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಎರಡು ಮೊಬೈಲ್ ಫೋನ್ 1,700 ನಗದು, ಕಾಮಾಕ್ಷಿಪಾಳ್ಯ ಪೊಲೀಸರು ಸದ್ದಾಮ್ ಹುಸೇನ್ ಎಂಬ ಆರೋಪಿಯನ್ನು ಬಂಧಿಸಿ ಒಂದೂವರೆ ಕೆಜಿ ಗಾಂಜಾ,
ಯಲಹಂಕ ಉಪನಗರ ಪೊಲೀಸರು ಸುಭೀರ್, ರೋಷನ್ ಮತ್ತು ಜಯಂತ್ ಎಂಬ ಆರೋಪಿಗಳನ್ನು ಬಂಧಿಸಿ 15 ಕೆಜಿ ಗಾಂಜಾ, ಅಮೃತಳ್ಳಿ ಪೊಲೀಸರು ಕೇರಳದ ಶಾನ್ವಿನ್ ಎಂಬ ಆರೋಪಿಯನ್ನು ಬಂಧಿಸಿ 85 ಗ್ರಾಂ ಎಂಡಿಎಂಎ ಕ್ರಿಸ್ಟಿಲ್ಸ್, ಕೊಡಿಗೆಹಳ್ಳಿ ಪೊಲೀಸರು ಸಮೀಲ್ ಅಹಮದ್ ಮೈಸೂರ್ ನಿವಾಸಿ ಎಂಬಾತನನ್ನು ಬಂಧಿಸಿ 34 ಗ್ರಾಂ ಎಂಡಿಎಂ ಕ್ರಿಷ್ಟಲ್ಸ್, ಬಾಗಲೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುತ್ತಾರೆ.