ದೇವನಹಳ್ಳಿ: ಗ್ರಾಮ ಪಂಚಾಯತಿ ಸರ್ವ ಸದಸ್ಯರ ಸಮ್ಮತದಿಂದ ಅಧ್ಯಕ್ಷ ಸ್ಥಾನ ದೊರೆತಿದ್ದು ಅವರಿಗೆ ಕೃತಜ್ಞತೆಗಳು ,ಕೋರಮಂಗಲ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸುವ ಉದ್ದೇಶದೊಂದಿಗೆ ಗ್ರಾಮಸ್ಥರಿಗೆ ಸುಸಜ್ಜಿತ ರಸ್ತೆ ಚರಂಡಿ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗುವುದು. ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿರುತ್ತದೆ.
ಸರ್ಕಾರದಿಂದ ಬರು ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ನಾನು ಬದ್ಧನಾಗಿರುತ್ತೇನೆ ಎಂದು ಕೋರಮಂಗಲ ನೂತನ ಅಧ್ಯಕ್ಷ ಎಚ್. ಧನಂಜಯ (ಮಂಜಣ್ಣ) ಹೇಳಿದರು.ತಾಲೂಕಿನ ಕೋರಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಕೆಎಂ.ಕೃಷ್ಣಪ್ಪ ರವರ ಅನಾರೋಗ್ಯ ಕಾರಣದಿಂದ ಸಾವನಪ್ಪಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲಾ ಸದಸ್ಯರುಗಳ ಸರ್ವಾನುಮತದಿಂದ ಅವಿರೋಧವಾಗಿ ಎಚ್ .ಧನಂಜಯ (ಮಂಜಣ್ಣ) ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಸುನೀಲ್ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಧನಂಜಯರವರಿಗೆ ಹಲವಾರು ಮುಖಂಡರುಗಳ ಶುಭಹಾರೈಸಿ ಮತ್ತು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ ಮುಖಂಡರಾದ ಅಣ್ಣೇಶ್ವರ ಭುವನಹಳ್ಳಿ ಮುನಿರಾಜು,ಗೋಪಾಲಕೃಷ್ಣ, ಕೋರಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಷ್ಪ ಟಿ. ಶಿವರಾಜ್, ಸದಸ್ಯರುಗಳಾದ ಹರೀಶ್ ಕುಮಾರ್, ಕನಕರತ್ನಮ್ಮ, ಗಾಯಿತ್ರಿ, ದೇವರಾಜ , ಮಂಜುಳಾ, ಕಿರಣ್, ಭಾಗ್ಯಲಕ್ಷ್ಮಿ, ಪಿಡಿಒ ಸತೀಶ್, ಸೇರಿದಂತೆ ಹಲವಾರು ಮುಖಂಡರುಗಳು ಚುನಾಯಿತ ಪ್ರತಿನಿಧಿಗಳು ಗ್ರಾಮಸ್ಥರು ಭಾಗವಹಿಸಿದ್ದರು.