ಕೋಲಾರ: ಸಾಮಾಜಿಕ ನ್ಯಾಯ ಸೇವಾ ಸಮಿತಿಯ ಪರಿಸರ ಮತ್ತು ವನ್ಯಜೀವನ ಸಂರಕ್ಷಣಾ ಒಕ್ಕೂಟ, ಕೋಲಾರ ಜಿಲ್ಲಾ ವಿಭಾಗದಿಂದ ಕೋಲಾರ ಹೊಸ ಬಸ್ ನಿಲ್ದಾಣ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಚಾಲನೆಯನ್ನು ಸಮಿತಿಯ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಸಂಚಾಲಕ ಪಿಲ್ಲರ್ ಎ.ಮಂಜು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಈ ನೆಲ ಜಲ ಪರಿಸರವನ್ನು ಸಂರಕ್ಷಿಸುವುದು ನಮ್ಮ ಆದ ಕರ್ತವ್ಯವಾಗಿದ್ದು, ನಾವೆಲ್ಲರೂ ಇಂತಹ ಉತ್ತಮ ಕಾರ್ಯಕ್ಕೆ ಸ್ವಯಂ ಪ್ರೇರಿತವಾಗಿ ಮುಂದಾಗಿರುವುದು ಶ್ಲಾಘನೀಯ. ಪರಿಸರ ಎಂದರೆ ನಮ್ಮ ಸುತ್ತ ಮುತ್ತಲಿನ ಗಿಡ ಮರಗಳು ಕೆರೆಕುಂಟೆಗಳು ಅವಲಂಬಿತ ಪ್ರದೇಶಕ್ಕೆ ಪರಿಸರ ಎಂದರ್ಥ ಆದರೆ ನಾವು ಪ್ರತಿ ನಿತ್ಯ ಮನುಷ್ಯನ ಆ ವೈಜ್ಞಾನಿಕ ಹಿತಕ್ಕಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದೇವೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಮಳೆ ನೀರು ಕೊಯ್ಲು, ಘನ ತ್ಯಾಜ್ಯ ನಿಯಂತ್ರಿಸುವುದು, ರಾಸಾಯನಿಕ ಮತ್ತು ಪ್ಲಾಸ್ಟಿಕ್ ಬೆಳಿಕೆಯನ್ನು ಸಂಪೂರ್ಣ ಕೊನೆಗೊಳಿಸಬೇಕು ಎಂದರು.
ಪರಿಸರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ರಕ್ಷಕರಾಗಬೇಕು ಪ್ಲಾಸ್ಟಿಕ್ ಚೀಲದ ಬದಲಾಗಿ ಜೈವಿಕ ಪೇಪರ್ ಚೀಲಗಳನ್ನು ಬೆಳೆಸಬೇಕು ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಗಿಡ ಮರಗಳನ್ನು ನೆಡಿಸಿ ಬೆಳೆಸಬೇಕು, ನೈಸರ್ಗಿಕ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಬೇಕು, ಆಗ ಆಮ್ಲಜನಕ ವೃದ್ಧಿಯಾಗಿ ಮಾನವ, ಸಸ್ಯಗಳು ಪ್ರಾಣಿ ಪಕ್ಷಿಗಳು ಮತ್ತು ಜಲಚರಗಳಿಗೆ ಉತ್ತಮ ತಾಜಾ ಗಾಳಿ ನೀರು ಉದ್ಭವಿಸುತ್ತದೆ. ಎಲ್ಲರ ಆರೋಗ್ಯ ಸುಧಾರಣೆಯಾಗಿ ಅನಾರೋಗ್ಯದಿಂದ ಮುಕ್ತಿಯಾಗಬೇಕು ಎಂದರು.
ಸಾಮಾಜಿಕ ನ್ಯಾಯ ಸೇವಾ ಸಮಿತಿಯ ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣಾ ಒಕ್ಕೂಟದ, ಜಿಲ್ಲಾ ಕಾರ್ಯಧ್ಯಕ್ಷ ಖಾದರ್ ಭಾಷಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಚಿನ್ಮಯ ಶಾಲೆಯ ವಿದ್ಯಾರ್ಥಿ ಎ.ಎಂ ಜಿತಿನ್ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಸಿಬಗತ್ ಉಲ್ಲಾ, ಸಮಿತಿಯ ಯುವ ಒಕ್ಕೂಟದ ರಾಜ್ಯ ಮುಖ್ಯ ಪ್ರಧಾನ ಕಾರ್ಯದರ್ಶಿ ಆರ್.ಮನು, ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಉಸ್ಮಾನ್, ಮುಳಬಾಗಿಲು ಸೀನಪ್ಪ, ಕಾರ್ಮಿಕ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಎ.ವೆಂಕಟೇಶ್ಗೌಡ, ರೈತ ಒಕ್ಕೂಟದ ವಿ.ಮುನಿಯಪ್ಪ, ವಾಸಿಮ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಜರಾಗಿದ್ದರು.