ಕೋಲಾರ: ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪ್ರತೀ ವರ್ಷವು ಸೆ. 27 ರಂದು ಜಿಲ್ಲೆಯ ಯಾವುದಾದರೂ ಪ್ರವಾಸಿ ಸ್ಥಳದಲ್ಲಿ ಆಚರಿಸಲಾಗುತ್ತದೆ. ಈ ವರ್ಷದಸಂದೇಶ “ಪ್ರವಾಸೋದ್ಯಮ ಮತ್ತು ಶಾಂತಿ” “TOURISM AND PEACE” ಆಗಿರುತ್ತದೆ. ಆದ್ದರಿಂದ ಕೋಲಾರ ನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸಂದೇಶಕ್ಕನುಗುಣವಾಗಿ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಶಾಂತಿಗಾಗಿ ಯೋಗಾಕಾರ್ಯಕ್ರವನ್ನು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ ಹಾಗೂ ಸರ್ಕಾರಿ ಪದವಿಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಬೆಳಿಗ್ಗೆ 8.00 ಗಂಟೆಗೆ ಸರಿಯಾಗಿ ಮಾನ್ಯ ಅಪರಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.ಆಯುಷ್ ಇಲಾಖೆಯ ಯೋಗಾತರ ಬೇತುದಾರರರು ಅಚ್ಚುಕಟ್ಟಾಗಿ ಯೋಗಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ ನಗರದ ಪದವಿ ಕಾಲೇಜಿನ ಪ್ರವಾಸೋದ್ಯಮ ಮತ್ತು ಇತಿಹಾಸ ವಿದ್ಯಾರ್ಥಿಗಳಿಗೆ ನಡೆಸಿದ ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಐತಿಹಾಸಿಕ ಸ್ಥಳ ಸೋಮೇಶ್ವರ ದೇವಾಲಯದಿಂದ ಕೋಲಾರಮ್ಮ ದೇವಾಲಯದವರೆಗೆ ಹೆರಿಟೇಜ್ ವಾಕ್ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಮಂಗಳ ಎಸ್.ಎಂ. ರವರು, ಆಯುಷ್ ಅಧಿಕಾರಿಗಳಾದ ಡಾ.ರಾಘವೇಂದ್ರ ರವರು ಹಾಗೂ ಸಿಬ್ಬಂದಿಗಳು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಗೀತಾ ರವರು ಹಾಗೂ ವಿದ್ಯಾರ್ಥಿಗಳು, ಕೋಲಾರ ನಗರದ ಪದವಿ ಕಾಲೇಜಿನ ಪ್ರಾದ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಗೌರಿಭಟ್ ಹಾಗೂ ಸಿಬ್ಬಂದಿಗಳು, ಪ್ರವಾಸಿ ಮಿತ್ರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.