ಬೆಂಗಳೂರು: ಮುಡಾ ಪ್ರಕರಣ ಮತ್ತು ವಾಲ್ಮೀಕ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ಪ್ರಕರಣಗಳನ್ನು ಬಿಜೆಪಿ ಒಂದು ತಾರ್ಕಿಕ ಅಂತ್ಯ ಕಾಣಿಸುವೆಡೆ ಸಾಗುತ್ತಿರುವ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೋವಿಡ್ ಪ್ರಕರಣದಲ್ಲಿ ಒಂದು ಎಫ್ಐಅರ್ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದೆ, ಕೋವಿಡ್ ಹಾವಳಿ ಕೊನೆಗೊಂಡು 4 ವರ್ಷ ಕಳೆದಿವೆ, ಇಷ್ಟು ದಿನ ಕಾಂಗ್ರೆಸ್ ನಾಯಕರು ಕಳ್ಳೇಕಾಯಿ ತಿಂದಿದ್ರಾ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಪ್ರಶ್ನಿಸಿದರು. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರಕ್ಕೆ ಜನರ ಜೀವ ಉಳಿಸುವುದು ಮುಖ್ಯವಾಗಿತ್ತು, ತಾವೆಲ್ಲ ದಿನಕ್ಕೆ 8-10 ಕೆಲಸ ಮಾಡಿದ್ದೇವೆ ಆದರೆ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಮೂರು ತಿಂಗಳವರೆಗೆ ಮನೆಯಿಂದ ಹೊರಬಂದಿರಲಿಲ್ಲ ಎಂದು ಅಶೋಕ ಹೇಳಿದರು.