ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿಯಿಂದ ದೂರು ನೀಡಿದ ಹಿನ್ನೆಲೆಯಲ್ಲಿ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.ಚೀಫ್ ಅಕೌಂಟೆಂಟ್ ಡಾ. ವಿಷ್ಣುಪ್ರಸಾದ್ ಎಂ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ ಸಮಯದ ಹಗರಣ ತನಿಖೆಗಾಗಿ ಎಸ್ಐಟಿ ರಚನೆಗೆ ಸರ್ಕಾರ ತೀರ್ಮಾನ ಕೈಗೊಂಡಿದೆ.ಎನ್-95 ಮಾಸ್ಕ್, ಪಿ ಪಿ ಇ ಕಿಟ್ ಮತ್ತು ಇತರೆ ಸಾಮಾಗ್ರಿಗಳನ್ನು ಖರೀದಿಯಲ್ಲಿ ಷಡ್ಯಂತ್ರ ರೂಪಿಸಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಆಸ್ತಿ ಮತ್ತು ಸರ್ಕಾರಿ ಹಣ ನಷ್ಟವಾಗಿದೆ, ನೂರಾರು ಕೋಟಿಯಂತೆ ನಷ್ಟ ಮಾಡಿ ಸ್ವಂತ ಲಾಭವನ್ನು ಪಡೆದುಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಾ.ಗಿರೀಶ್, ರಘು ಜಿ.ಪಿ, ಮುನಿರಾಜ್ ಲಾಜ್ ಎಕ್ಸ್ಪೋಟ್ರ್ಸ್, ಪ್ರೂಡೆಂಟ್ ಮ್ಯಾನೆಜ್ಮೆಂಟ್ ಸಲೂಷನ್ಸ್ ಸೇರಿದಂತೆ ಕೆಲ ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.ಒಟ್ಟು 18 ಸರ್ಕಾರಿ ಆಸ್ಪತ್ರೆಗೆ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್ ನೀಡುವುದಾಗಿ ವಂಚನೆ ಸೇರಿದಂತೆ ಸರ್ಕಾರದ ಯಾವುದೇ ಅನುಮೋದನೆ ಮತ್ತು ಅನುಮತಿ ನೀಡದೆ ಬಿಲ್, 167 ಕೋಟಿ ಆಕ್ರಮ, ಮುಂಬೈ ಮೂಲದ ಎರಡು ಕಂಪನಿಗೆ ಕಾನೂನುಬಾಹಿರ ಟೆಂಡರ್ ನೀಡಿರುವುದು, ಈ ಎರಡು ಕಂಪನಿಗಳು ಟೆಂಡರ್ ಪಡೆದು ಯಾವುದೇ ಪಿಪಿಇ ಕಿಟ್ ಎನ್ 95 ಮಾಸ್ಕ್ ಸರಬರಾಜು ಮಾಡಿಲ್ಲವೆಂಬ ಆರೋಪ ಮಾಡಲಾಗಿದೆ. ಈ ಸಂಬಂಧ ವಿಧಾನಸೌದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.