ಬೆಂಗಳೂರು: ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಲೇಔಟ್ ನಾಲ್ಕನೇ ಅಡ್ಡ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಕುಟುಂಬುವೊಂದರ ಗೃಹಿಣಿ ತಾನು ತನ್ನ ಮಕ್ಕಳನ್ನು ಉಸಿರುಗಟ್ಟಿಸಿ ತಾನು ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಮೂಲತಃ ಮಧುಗಿರಿಯವಾರ ಸುರೇಶ ಮತ್ತು ಕುಸುಮಾ ದಂಪತಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ಗಂಡಹೆಂಡತಿ ನಡುವೆ ಜಗಳವಾಗಿತ್ತು. ನಿನ್ನೆ ರಾತ್ರಿ ಕುಸುಮ (35) ಮತ್ತು ಆಕೆಯ ಮಕ್ಕಳಾದ ಶ್ರೇಯಾನ್ ಗಂಡು(7), ಆರು ವರ್ಷ(6) ಹಾಗೂ ಚಾರ್ವಿ ಒಂದೂವರೆ ವರ್ಷದ ಹೆಣ್ಣು ಮಗುವಿಗೆ ಉಸಿರು ಗಟ್ಟಿಸಿ ಅವರು ಮೃತರಾದಮೇಳೆ ತಾನೂ ನೇಣು ಹಾಕಿಕೊಂಡು ನೇಣು ಬಗೆದು ತಾನು ಸಹ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಸಾವಿಗೂ ಮುನ್ನಾ ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ.