ಬೆಂಗಳೂರು:ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕುಟುಂಬದ ಗಲಾಟೆಯ ಕಿರುಕುಳ ತಾಳಲಾರದೆ ಹುಸ್ಕೂರ್ ರಸ್ತೆಯ ಕಾರ್ಮುಲ ರಾಮ್ ರೈಲ್ವೆ ಗೇಟ್ ಬಳಿ ನಿನ್ನೆ ಮಧ್ಯರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಆಗಿ ಸೇವೆ ಸಲ್ಲಿಸುತ್ತಿರುವ ತಿಪ್ಪಣ್ಣ ಅಲಗೂರು 33 ವರ್ಷವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಡೆತ್ ನೋಟ್ ನಲ್ಲಿ ಹೆಂಡತಿ ಮತ್ತು ಮಾವನ ಜೊತೆಯಲ್ಲಿ ಗಲಾಟೆ ಆಗಿರುವುದು ನಮೂದಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ರೈಲ್ವೆ ಎಸ್ಪಿ ತಿಳಿಸಿರುತ್ತಾರೆ.ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ 108 ಬಿಎನ್ಎಸ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿರುತ್ತದೆ.