ಲಿಟ್ಲ್ ಮಾಸ್ಟರ್ ಸುನಿಲ್ ಗಾವಸ್ಕರ್ ಇದ್ದಲ್ಲಿ ವಿವಾದಗಳೂ ಇದ್ದೇ ಇರುತ್ತವೆ. ಇದೀಗ ಬಾರ್ಡರ್ ಗಾವಸ್ಕರ್ ಟ್ರೋಫಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಹಾಜರಿರಲಿಲ್ಲ ಎಂಬುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಗಾವಸ್ಕರ್ ಅವರನ್ನು ಕಡೆಗಣಿಸಿದೆ ಎಂಬ ಮಾತೂ ಕೇಳಿ ಬಂದಿದೆ.
ದಿನ ಆಸ್ಟ್ರೇಲಿಯಾ ತಂಡ ಭಾರತವನ್ನು 6 ವಿಕೆಟ್ ಗಳಿಂದ ಸೋಲಿಸಿ ಸರಣಿಯನ್ನೂ 3-1 ಅಂತರದಿಂದ ಗೆದ್ದುಕೊಂಡಿತು. ಬಹುಮಾನ ವಿತರಣೆ ವೇಳೆ ಎರಡೂ ದೇಶಗಳ ಕ್ರಿಕೆಟ್ ದಂತಕತೆಗಳಾದ ಅಲನ್ ಬಾರ್ಡರ್ ಮತ್ತು ಸುನಿಲ್ ಗವಾಸ್ಕರ್ ಇಬ್ಬರೂ ಇರಬೇಕಾದ್ದು ಆ ಟ್ರೋಫಿಗೆ ನೀಡುವ ಗೌರವ. ಈ ಹಿಂದೆಲ್ಲಾ ಇಬ್ಬರ ಉಪಸ್ಥಿತಿಯಲ್ಲೇ ಟ್ರೋಫಿ ಪ್ರದಾನ ಮಾಡಲಾಗಿತ್ತು.