ಬೆಂಗಳೂರು: ಹಬ್ಬದಸೀಸನ್ ಆರಂಭವಾಗು ತ್ತಿರುವ ಈ ಸಂದರ್ಭದಲ್ಲಿ ಪ್ರೀಮಿಯಂ ಶಾಪಿಂಗ್ ತಾಣವಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬರೋ
ಬ್ಬರಿ 65 ಅಡಿ ಎತ್ತರದ ಕ್ರಿಸ್ಮಸ್ ಟ್ರೀಯನ್ನು ಸ್ಥಾಪಿಸಿದ್ದು, ಗ್ರಾಹಕರು ಮತ್ತು ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ. ಇದರ ಜತೆಗೆ ಅತ್ಯಾಕರ್ಷಕ ಅಲಂಕಾರ ಮತ್ತು ಅದ್ದೂರಿ ಚಟುವಟಿಕೆಗಳು ನಡೆಯುತ್ತಿವೆ.
ಮಿನುಗುವ ದೀಪಗಳು, ಐಷಾರಾಮಿ ಆಭರಣಗಳ ಸಂಯೋಜನೆಯೊಂದಿಗೆ ಅಲಂಕರಿಸಲ್ಪಟ್ಟಿರುವ ಈ ಆಕರ್ಷಣೆಯು ಹಬ್ಬದ ಋತುವಿನ ಅತ್ಯುತ್ತಮ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಈ ಮೂಲಕ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಯೂರೋಪಿಯನ್ ಥೀಮ್ಸ್ ಮಾರ್ಕೆಟ್ ರೀತಿಯಲ್ಲಿ ಕಾಣಿಸುತ್ತಿದ್ದು, ಗ್ರಾಹಕರು, ಕುಟುಂಬಗಳು ಮತ್ತು ಅವರ ಸ್ನೇಹಿತರು ಇದನ್ನು ವೀಕ್ಷಿಸಿ ಮಂತ್ರಮುಗ್ಧರಾಗಲಿದ್ದಾರೆ. ಕ್ಯಾರೋಲ್ ಹಾಡುಗಾರಿಕೆಯೊಂದಿಗೆ ಸಾಂತಾ ಮೀಟ್ & ಗ್ರೀಟ್ ಎಂಬ ಅದ್ಭುತವಾದ ಕಾರ್ಯಕ್ರಮ ನಿರಂತರವಾಗಿ ಸಾಗುತ್ತದೆ. ಆಕರ್ಷಕವಾದ ಸ್ಪೋಮ್ಯಾನ್ ಮತ್ತು ಅಂತಾರಾಷ್ಟ್ರೀಯ ಪ್ಲೇರ್ನ ಕ್ರಿಸ್ಮಸ್ ಪರೇಡ್ ಹಬ್ಬದ ಮೆರಗನ್ನು ಇನ್ನಷ್ಟು ಹೆಚ್ಚಿಸಲಿದೆ.
ಫೀನಿಕ್ಸ್ ಮಾಲ್ ಏಷ್ಯಾವು ತನ್ನ ಸರಿಸಾಟಿಯಿಲ್ಲದ ಶಾಪಿಂಗ್ ಮತ್ತು ಲೈಫ್ ಸ್ಟೈಲ್ ಶ್ರೇಷ್ಠತೆಗೆ ಪ್ರಖ್ಯಾತಿಯನ್ನು ಪಡೆದಿದೆ. ಇಂದು ನಟ ಅರ್ಜುನ್ ರಾಂಪಾಲ್ ಅವರು ಭವ್ಯವಾದ ಕ್ರಿಸ್ಮಸ್ ಟ್ರೇ ಲೈಟಿಂಗ್ ಮತ್ತು ಕ್ರಿಸ್ಮಸ್ ಅಲಂಕಾರವನ್ನು ಅದ್ದೂರಿಯಾಗಿ ಉದ್ಘಾಟಿಸಿದರು. ಇದರೊಂದಿಗೆ ಕ್ರಿಸ್ಮಸ್ ಆಚರಣೆಗೆ ಚಾಲನೆ ಸಿಕ್ಕಿತು. ರಾಂಪಾಲ್ ಅವರು 65 ಅಡಿ ಎತ್ತರದ ಕ್ರಿಸ್ಮಸ್ ಟೀ ಮತ್ತು ಕ್ರಿಸ್ಮಸ್ ಮಾರುಕಟ್ಟೆಯನ್ನೂ ಸಹ ಉದ್ಘಾಟಿಸಿದರು. ಇದೇ ವೇಳೆ, ಗಣ್ಯಾತಿಗಣ್ಯರು ಗ್ಯಾಸ್ಕೋಪಬ್ ಆಗಿರುವ ದೊಬಾರಾದಲ್ಲಿ ಏರ್ಪಡಿಸಿದ್ದ ಡಿಜೆ ಪಾರ್ಟಿಯಲ್ಲಿ ಆನಂದ ಅನುಭವಿಸಿದರು.
ದಕ್ಷಿಣ ಭಾರತದ ಮಾಲ್ಗಳ ನಿರ್ದೇಶಕ ಗಜೇಂದ್ರ ಸಿಂಗ್ ರಾಥೋಡ್ ಅವರು ಮಾತನಾಡಿ, “ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಈ ವರ್ಷದ ಭವ್ಯವಾದ ಕ್ರಿಸ್ಮಸ್ ಅಲಂಕಾರವನ್ನು ಅನಾವರಣಗೊಳಿಸುತ್ತಿರುವುದಕ್ಕೆ ನಮಗೆ ಅತೀವ ಹರ್ಷ ಎನಿಸುತ್ತಿದೆ. ಇದು ಸಂತೋಷ, ಸಂಪ್ರದಾಯ ಮತ್ತು ಒಗ್ಗಟ್ಟಿನ ಒಂದು ಸುಮಧುರ ಆಚರಣೆಯಾಗಿದೆ” ಎಂದರು.
ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸೆಂಟರ್ ಡೈರೆಕ್ಟರ್ ಮತ್ತು ದಕ್ಷಿಣ ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷೆಯಾಗಿರುವ ರಿತು ಮೆಹ್ರಾ ಅವರು ಮಾತನಾಡಿ, “ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ನಾವು ಸಾಮಾಜಿಕ-ಸಾಂಸ್ಕೃತಿಕ ಅನುಭವವನ್ನು ಹೆಚ್ಚಿಸುವ ದಿಸೆಯಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಂಡಿದ್ದೇವೆ ಮತ್ತು ಈ ಬಾರಿಯ ಕ್ರಿಸ್ಮಸ್ ನಾವು ನೀಡುವ ಆಕರ್ಷಣೆಯ ಮೆರಗನ್ನು ಹೆಚ್ಚಿಸುತ್ತದೆ” ಎಂದು ತಿಳಿಸಿದರು.