ಬೆಂಗಳೂರು: ವಿದೂಷಿ ರೋಹಿಣಿ ಅನಂತ್ ಅವರ ಕ್ಲಾಸಿಕಲ್ ರಿದಮ್ಸ್ ನ ಅನಾವರಣ ಸೀಸನ್ -7ರ ಯಾನ ನೃತ್ಯಗಳ ಪ್ರದರ್ಶನ ಕಾರ್ಯಕ್ರಮ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ನಡೆಯಿತು.ಪ್ರಮುಖವಾಗಿ “ಯಾನ” ನೃತ್ಯ ರೂಪಕ ಪ್ರದರ್ಶನ ವಿದೂಷಿ ರೋಹಿಣಿ ಅನಂತ್ ಅವರ ಕೋರಿಯಾಗ್ರಫಿಯಲ್ಲಿ ಬಿ.ಎಸ್.ರಂಗಮಣಿ ಅವರ ರಚನೆಯಲ್ಲಿ ವಿ.ವಿ.ಗೋಪಾಲ್ ಸಾಹಿತ್ಯದಲ್ಲಿ ಪ್ರವೀಣ್ .ಡಿ.ರಾವ್ ಅವರ ಉತ್ತಮ ಸಂಗೀತದ ಮೂಲಕ “ಯಾನ” ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ದೇವಾಲಯದಲ್ಲಿ ಬೆಳೆದ ಸುಮಂಗಲಿ ದೇವರಿಗೆ ಮುಡುಪಾಗಿಟ್ಟ ತನ್ನ ನೃತ್ಯ ಕಲೆಯನ್ನು ಅಂದಿನ ರಾಜನೊಬ್ಬನ ಆಗ್ರಹಕ್ಕೆ ಒಳಗಾಗಿ ಮಲವ್ವನಲ್ಲಿ ಮೊರೆ ಇಟ್ಟಾಗ ದೇವಿಯ ಅನುಗ್ರಹದಿಂದ ಅಲ್ಲಿಂದ ಪಾರಾಗಿ ತಾನು ಪ್ರೀತಿಸಿದ ಸುದರ್ಶನನಿಂದ ಬೇರ್ಪಟ್ಟು ಕಾಡು ಮೆದು ಸುತ್ತಿ ಕೊನೆಗೆ ರಂಗನಾಥನ ದೇವಾಲಯದಲ್ಲಿಆಶ್ರಯ ಪಡೆಯುತ್ತಾಳೆ. ಅಲ್ಲೊಂದು ದಿನ ಆಕಸ್ಮಿಕವಾಗಿ ಭೇಟಿಯಾಗಿ ತಮ್ಮ ಹಳೆಯದಿನ ನೆನೆದು ಮುಂದೆ ತಮ್ಮ ಜೀವನವನ್ನೇ ಮೃದಂಗ, ನೃತ್ಯ ಕ್ಕಾಗಿ ಮುಡುಪಿಟ್ಟು ಸಮಾಜದಲ್ಲಿ ವೇದಿಕೆಯಲ್ಲಿ ನೃತ್ಯ ಕಲೆಯನ್ನು ಆರಂಭಿಸುತ್ತಾರೆ. ಈ ಪ್ರಯಾಣವೇ ನೃತ್ಯಯಾನವಾಗಿದೆ ಎಂದು ರೋಹಿಣಿ ಅನಂತ್ ವಿವರಿಸಿದರು.
ನೃತ್ಯ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಾನಪದ ಆಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗುತಿ,ನೃತ್ಯಯಾನ ಕಾರ್ಯಕ್ರಮದಲ್ಲಿ ಗಂಡು, ಹೆಣ್ಣು, ಲಿಂಗತ್ವದ ಅಸಮಾನತೆ ಇಲ್ಲದೇ ಏಳು ವರ್ಷದಿಂದ ಹಿಡಿದು 70ವರ್ಷದವರೆಗಿನವರು ನೃತ್ಯ ಪ್ರದರ್ಶನ ನಡೆಸಲು ಅವಕಾಶ ನೀಡಿರುವುದು ಶ್ಲಾಘನೀಯ ಇದೊಂದು ಸಮಾನ ವೇದಿಕೆ ಎಂದು ಅಭಿಪ್ರಾಯ ಪಟ್ಟರು.
ಪೋಸ್ ಪೋರ್ಟ್ ಸಿಗದ ಕಾರಣದಿಂದ ಶಾರ್ಜಾಕ್ಕೆ ಕನ್ನಡಪರ ಕಾರ್ಯಕ್ರಮಕ್ಕೆ ತೆರಳಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗದ ಮಂಜಮ್ಮ ಜೋಗುತಿ ಅವರಿಗೆ “ಕಲಾ ಸಾರಥಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನಾಗ ಕನ್ ಸ್ಟ್ರಕ್ಷನ್ ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ಸೆಲ್ವಕುಮಾರ್,ಸಾಹಿತಿ ವಿಕ್ರಮ್ ಬಿ.ಕೆ. ನಟಿ ಸ್ವಪ್ನಾ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.