ಬೆಂಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಆಗಸ್ಟ್ನಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿ ಕುರಿತು ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಬೆಂಗಳೂರು ಇಲ್ಲಿ ದಿನಾಂಕ 27 11 2024 ರಂದು ಬಹುಮಾನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಳೆದ ತಿಂಗಳು ಬೆಂಗಳೂರಿನಲ್ಲಿ ನೆಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಹುಮಾನ ವಿತರಣಾ ಸಮಾರಂಭದ ಆತಿಥ್ಯವನ್ನುಗೌರವದಿಂದ ಬೆಂಗಳೂರು ನಗರ ಜಿಲ್ಲಾ ಸಮಿತಿಯು ವಹಿಸಿಕೊಂಡಿತ್ತು.ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅಶ್ವತ್ಥನಾರಾಯಣ್ ಅವರು ಉಪನ್ಯಾಸ ನೀಡಿದರು. ಪ್ರಾಣಿ ಶಾಸ್ತ್ರದ ಪ್ರಾಧ್ಯಾಪಕ ಡಾ.ಟಿ ಎಂ.ದೇವರಾಜು ಅವರುಅಧ್ಯಕ್ಷತೆವಹಿಸಿದ್ಧರು. ಜ್ಞಾನೇಶ್ವರ ಅವರು ಎಲ್ಲರನ್ನು ಸ್ವಾಗತಿಸಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಈ ಬಸವರಾಜು ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು ಪ್ರಸ್ತುತ ವಿಜ್ಞಾನದ ಸಾಧನೆ ಕುರಿತು ಬೆಂಗಳೂರಿನ ಹಲವು ವಿಧದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳು ನೆಡೆಸುತ್ತಿರವ ಚಟುವಟಿಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ರಾಜ್ಯಖಜಾಂಚಿ ಎಚ್ ಸಿ ಮಹದೇವಪ್ಪ ಕನ್ನಡ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಆರ್ ಪದ್ಮನಾಭ ಇಂಗ್ಲೀಷ್ ಭಾಗದ ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ರಾಜಶೇಖರಯ್ಯ ಜಿ.ಮಠಪತಿ ಡಾ. ವಿಜಯ ವೆಂಕಟರಮಣ ಶಾನುಭಾಗ್ ಅವರುಗಳು ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿ ಎಂ ಲಕ್ಷ್ಮಿ ನರಸಿಂಹ ಅಚ್ಚುಕಟ್ಟಾಗಿ ನಿರ್ವಹಿಸಿದರು.