ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ, ಇಡೀ ಸಂಘಟನೆಯಲ್ಲಿ ಭಾರೀ ಬದಲಾವಣೆ ನಿರೀಕ್ಷೆಯಿದೆ. ತೆರೆಮರೆಯಲ್ಲಿ ಮಂಡಲ್ ಅಧ್ಯಕ್ಷರಾಗಲು ಅನೇಕ ನಾಯಕರು ಕಸರತ್ತು ಆರಂಭಿಸಿದ್ದಾರೆ.
ಮಾಜಿ ಶಾಸಕರುಗಳಿಂದ ಮಂಡಲ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಡಲಾಗಿದ್ದು, ಮಂಡಲ್ ಅಧ್ಯಕ್ಷರಾಗಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.ಮುಂದೆ 2028 ರಲ್ಲಿ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿಡಿತ ಸಾಧಿಸಬೇಕೆಂದು ಅಂದರೆ, ಕ್ಷೇತ್ರದಲ್ಲಿ ತಮ್ಮದೇ ಆದ ಅಧ್ಯಕ್ಷರಿರಬೇಕು ಎಂಬ ಇರಾದೆ ಹೊಂದಿರುವ ಮುಖಂಡರು ಮಂಡಲ ಅಧ್ಯಕ್ಷರ ಸ್ಥಾನಕ್ಕೆ ತಮ್ಮವರನ್ನೇ ಆಯ್ಕೆ ಮಾಡಲು ಮುಂದಾಗಿದ್ದಾರೆ.
ಮುಂದಿನ ಚುನಾವಣೆಗೆ ಮಂಡಲ ಅಧ್ಯಕ್ಷರ ಮೂಲಕವೇ ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಲಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಹೀಗಾಗಿ ಮಾಜಿ ಶಾಸಕರುಗಳಿಂದ ಮಂಡಲ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು ಮಾಡಿದ್ದಾರೆ. ತಾವೇ ಮಂಡಲ್ ಅಧ್ಯಕ್ಷರಾಗುವುದು ಅಥವಾ ತಮ್ಮ ಕಡೆಯವರಿಗೆ ಸಂಘಟನೆಯಲ್ಲಿ ಮಂಡಲ್ ಅಧ್ಯಕ್ಷರಾಗಿ ಮಾಡುವುದು.ಆ ಮೂಲಕ ಮುಂದೆ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತಾವೇ ಅಭ್ಯರ್ಥಿ ಆಗಬೇಕೆಂದು ಮಾಸ್ಟರ್ಪ್ಲಾನ್ ರೂಪಿಸಿಕೊಂಡಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಸಂಘಟನಾತ್ಮಕ ಜಿಲ್ಲೆಗೆ ಜಿಲ್ಲಾಧ್ಯಕ್ಷರ ನೇಮಕವಾಗಿದ್ದು, ಜಿಲ್ಲಾಧ್ಯಕ್ಷರ ನೇಮಕ ಆಗಿರುವ ಬೆನ್ನಲ್ಲೇ ಮಂಡಲ್ ಅಧ್ಯಕ್ಷ ಸ್ಥಾನದ ಮೇಲೆ ನಾಯಕರುಗಳ ಲಾಬಿ ಆರಂಭವಾಗಿದೆ.