ಬೆಳಗಾವಿ: ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ ಪ್ರಕರಣ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿದ್ದು, ಈ ಸಂಬಂಧ ಸನದಲ್ಲಿ ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆದೆ. ಇದರಿಂದ ಸ್ಪೀಕರ್ ಯುಟಿ ಖಾದ್ ಅವರು ಸದನವನ್ನು ಕೊಂಚ ಸಮಯ ಮುಂದೂಡಿದರು. ಇದರಿಂದ ಕೆರಳಿದ ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಜೊತೆ ಜಗಳಕ್ಕೆ ಬಿದ್ದಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಖಾದರ್ ಜೊತೆ ಏರು ಧ್ವನಿಯಲ್ಲೇ ಜಗಳ ಮಾಡಿದ್ದಾರೆ. ಅಲ್ಲದೇ ಸ್ಪೀಕರ್ ಕಚೇರಿಯ ಮೇಜು ಗುದ್ದಿ ಖಾದರ್ ಅವರ ಜೊತೆ ಏರು ಧ್ವನಿಯಲ್ಲೇ ಜಗಳಕ್ಕಿಳಿದರು.
ಶಾಸಕ ಸುನೀಲ್ ಕುಮಾರ್, ವಿಪಕ್ಷ ನಾಯಕ ಅಶೋಕ್, ವಿಜಯೇಂದ್ರ, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಸುರೇಶ್ ಗೌಡ ಸೇರಿದಂತೆ ಬಿಜೆಪಿ ಶಾಸಕರು ಸ್ಪೀಕರ್ ಕಚೇರಿಯಲ್ಲಿ ಖಾದರ್ ಅವರ ಜೊತೆ ವಾಗ್ದಾದ ನಡೆಸಿದ್ದಾರೆ. ಬಿಜೆಪಿ ಶಾಸಕರು ಸ್ಪೀಕರ್ ಜೊತೆ ಜಗಳದ ವಿಷಯ ತಿಳಿಯುತ್ತಿದ್ದಂತೆಯೇ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಸ್ಥಳಕ್ಕೆ ದೌಡಾಯಿಸಿ ಸ್ಪೀಕರ್ ಯುಟಿ ಖಾದರ್ ಬೆಂಬಲಕ್ಕೆ ನಿಂತರು. ಹೀಗಾಗಿ ಎರಡೂ ಕಡೆಯಿಂದ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಸ್ಪೀಕರ್ ಕಚೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಗೃಹ ಸಚಿವರ ಮಾತಿನ ಬಳಿಕ ಸಿಸಿ ಪಾಟೀಲ್ ಮಾತಿಗೆ ಅವಕಾಶ ನೀಡಲಾಗಿತ್ತು. ಆದರೆ ಏಕಾಏಕಿ ಸಿಸಿ ಪಾಟೀಲ್ ಬದಲಿಗೆ ಕೃಷ್ಣ ಭೈರೆಗೌಡರಿಗೆ ಅವಕಾಶ ನೀಡಲಾಯಿತು. ಈ ನಡುವೆ ವಿಜಯಾನಂದ್ ಕಾಶಪ್ಪನವರ್ ಸಹ ಮಾತನಾಡಿ, ಆರ್ ಎಸ್ ಎಸ್ ಪ್ರೇರಿತ ಕಲ್ಲುತೂರಾಟ ಜರಿದರು. ಇದರಿಂದ ರೋಷಾವೇಷಗೊಂಡ ಬಿಜೆಪಿ ಶಾಸಕರು, ಕಾಶಪ್ಪನವರ್ ಹೇಳಿಕೆಯನ್ನು ಖಂಡಿಸಿ ಏರು ಧ್ವನಿಯಲ್ಲೇ ಮಾತನಾಡತೊಡಗಿದರು.
ಎರಡೂ ಕಡೆಯಿಂದ ಗಲಾಟೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಪೀಕರ್ ಸದನವನ್ನು ಕೊಂಚ ಸಮಯ ಮುಂದೂಡಿದರು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸ್ಪೀಕರ್ ಜೊತೆ ಜಗಳಕ್ಕೆ ಬಿದ್ದಿದ್ದಾರೆ. ಲಾಠಿ ಚಾರ್ಜ್ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲವೆಂದು ಸ್ಪೀಕರ್ ಜತೆ ವಾಗ್ವಾದಕ್ಕೀಳಿದರು. ಕೊನೆಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಪೀಕರ್ ಕಚೇರಿಗೆ ಕಾಂಗ್ರೆಸ್ ಶಾಸಕರು, ಸಚಿವರು ದೌಡಾಯಿಸಿ ಖಾದರ್ ಅವರ ಬೆಂಬಲಕ್ಕೆ ನಿಂತರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು. ಇದರಿಂದ ಸ್ಪೀಕರ್ ಕಚೇರಿಯಲ್ಲಿ ಸ್ವಲ್ಪ ಹೊತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಇನ್ನು ಈ ಸಂಬಂಧ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಸ್ಪೀಕರ್ ಯು.ಟಿ.ಖಾದರ್ ಮನಸೋ ಇಚ್ಛೆ ಅಧಿವೇಶನ ನಡೆಸುತ್ತಿದ್ದಾರೆ. ಸದನಕ್ಕೆ ಗೌರವ ಕೊಡಬೇಕು, ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಪಾಯಿಂಟ್ ಆಫ್ ಆರ್ಡರ್ ಎತ್ತಿದರೂ ಗಮನವಿಲ್ಲ. ಪಂಚಮಸಾಲಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆ ಚರ್ಚೆಯಾಗಬೇಕು. ಸ್ಪೀಕರ್ ಮೂಲಕ ರಾಜ್ಯ ಸರ್ಕಾರ ವಿಷಯಾಂತರ ಮಾಡುತ್ತಿದೆ. ಸ್ಪೀಕರ್ ಯು.ಟಿ.ಖಾದರ್ ನಡವಳಿಕೆಯಲ್ಲಿ ಬದಲಾವಣೆ ಆಗಿಲ್ಲ. ಖಾದರ್ ಸ್ಪೀಕರ್ ಘನತೆಗೆ ಅಗೌರವ ತೋರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಈ ಸಂಬಂಧ ಟಿವಿ9ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸ್ವೀಕರ್ ಕಾಂಗ್ರೆಸ್ ಏಜೆಂಟ್ ರೀತಿ ಮಾಡಿದ್ರೆ ಸುಮ್ಮನೆ ಇರಲ್ಲ. ನಾವು ಬಿಜೆಪಿಯವರು ಗಲಾಟೆ ಮಾಡುತ್ತೇವೆ. RSS ಬಗ್ಗೆ ಮಾತಾನಾಡದಿದ್ದರೆ ಪ್ರಿಯಾಂಕ್ ಖರ್ಗೆ. ಕೃಷ್ಣ ಭೈರೇಗೌಡ ಹಾಗೂ ಇನ್ನೊಬ್ಬರು ಅವರ ಹೆಸರು ನಾನು ಹೇಳಲ್ಲ. ಅವರಿಗೆ ತಿಂದ ಅನ್ನ ಕರಗುವುದಿಲ್ಲ. ಇದು ಹಿಂದೂ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಲಿಂಗಾಯತ ವಿರೋಧ ಎಂದು ಆಕ್ರೋಶ ವ್ಯಕ್ತಪಡಿಸಿದರು.