ರಾಮನಗರ: ಮಧ್ಯಮ ವರ್ಗ ಮತ್ತು ಬಡ ಜನರ ಮೇಲೆ ದೌರ್ಜನ್ಯವೆಸಗುವ ಖಾಸಗಿ ಲೇವಾದೇವಿ ಬಡ್ಡಿಕೋರರು ಹಾಗೂ ಮೈಕ್ರೋ ಫೈನಾನ್ಸ್ಗಳ ಹಾವಳಿ ನಿಯಂತ್ರಣಕ್ಕೆ ಖಾಸಗಿ ಲೇವಾದೇವಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದ್ದೆ. ಆ ಕಾಯ್ದೆ ಏನಾಯಿತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಾಲಯದ ಮುಖ್ಯದ್ವಾರ ಉದ್ಘಾಟಿಸಿದ ತರುವಾಯ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇವಲ ರಾಮನಗರ ಅಲ್ಲ, ರಾಜ್ಯದ ಹಲವೆಡೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಈಗ ಕಾಂಗ್ರೆಸ್ ಸರ್ಕಾರ 2ಸಾವಿರ ಗ್ಯಾರಂಟಿ ಹಣ ಕೊಟ್ಟಿದ್ದಾರಲ್ಲ, ಮತ್ಯಾಕೆ ಜನ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡುತ್ತಿದ್ದಾರೆ ಎಂದರು.
ನಾನು ಸಿಎಂ ಆಗಿದ್ದಾಗ ಬಿಲ್ ಪಾಸ್ ಮಾಡಿ ಖಾಸಗಿ ಲೇವಾದೇವಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದ್ದೆ.ಆ ಬಿಲ್ ಏನಾಯಿತು.ಅಂದಿನ ಸಹಕಾರ ಸಚಿವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಕೇರಳದಲ್ಲಿ ಈ ವಿಚಾರಕ್ಕೆ ಒಂದು ಕಮಿಷನ್ ಇದೆ.ಅಂತಹ ಒಂದು ಕಮಿಷನ್ ಇಲ್ಲೂ ಕೂಡಾ ತೆರೆದು ಸಾಲ ತೆಗೆದುಕೊಂಡು ಕಟ್ಟಲು ಆಗದವರಿಗೆ ಅನುಕೂಲ ಮಾಡಬೇಕು ಅಂತ ಮಾಡಿದ್ದೆ. ಆದರೆ, ನಮ್ಮ ಸರ್ಕಾರ ತೆಗೆದುಹಾಕಿದರು.ಇವತ್ತು ಅವರದೇ ಸರ್ಕಾರ ಇದೆಯಲ್ಲ ಏಕೆ ಮಾಡುತ್ತಿಲ್ಲ ಎಂದು ಕೇಳಿದರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಮನಗರದಲ್ಲಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಉದ್ದಾರ ಮಾಡುತ್ತೇವೆ ಅಂತ ಹೇಳಿದವರು ಯಾರಾದರು ಹೋಗಿ ಅವರ ಸಮಸ್ಯೆ ಕೇಳಿದ್ದಾರ.ಯಾವ ಸಚಿವರಾದರು ಬಂದಿದ್ದಾರಾ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಬಡವರ ಮೇಲೆ ಕಾಳಜಿ ಇರುವವರು ಯಾರು ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.ರಾಮನಗರ ಶಾಸಕರ ವಿರುದ್ಧ ಭೂಕಬಳಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮನಗರ ಶಾಸಕರಾದ ಅವರ ಬಗ್ಗೆ ಏಕೆ ಚರ್ಚೆ ಮಾಡೋಣ ಎಂದು ಲೇವಡಿ ಮಾಡಿದರು.