ಎಥ್ನಿಕ್ ಫ್ಯಾಷನ್ನಲ್ಲಿ ಡೈರೆಕ್ಟ್-ಟು-ಕಸ್ಟಮರ್ (ಡಿ2ಸಿ) ಜಾಗತಿಕ ಬ್ರಾಂಡ್ ಮತ್ತು ಉದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ಗಳಲ್ಲಿ ಒಂದಾದ ಶೋಬಿತಂ ಫೆಬ್ರವರಿ 5, 2025ರಂದು ಮೊಟ್ಟಮೊದಲ ಭೌತಿಕ ಮತ್ತು ಅನುಭವಾತ್ಮಕ ಮಳಿಗೆಯ ಅದ್ಧೂರಿ ಪ್ರಾರಂಭವನ್ನು ಪ್ರಕಟಿಸಿದೆ.
ಈ ಪ್ರಾರಂಭೋತ್ಸವವು ಶೋಬಿತಂಗೆ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿದ್ದು ಖ್ಯಾತ ನಟಿ ಮತ್ತು ಘನತೆ, ಸಾಂಪ್ರದಾಯಿಕತೆ, ಅತ್ಯುತ್ತಮ ಸೀರೆಗಳ ಸಂರಕ್ಷಕ ಮತ್ತು ಸಾಂಪ್ರದಾಯಿಕ ಕೈಮಗ್ಗಗಳನ್ನು ಉತ್ತೇಜಿಸುವ ಶೋಬಿತಂನ ಜಾಗತಿಕ ಬ್ರಾಂಡ್ ರಾಯಭಾರಿ ವಿದ್ಯಾ ಬಾಲನ್ ಅವರು ಉದ್ಘಾಟಿಸಿದರು. ಶೋಬಿತಂ ಸಹ-ಸಂಸ್ಥಾಪಕಿ ಅಪರ್ಣಾ ತ್ಯಾಗರಾಜನ್, ನಮ್ಮ ಮೊದಲ ಮಳಿಗೆಯು ಶೋಬಿತಂಗೆ ಪ್ರಮುಖ ಮೈಲಿಗಲ್ಲಾಗಿದ್ದು ಅದು ತನ್ನ ಯಶಸ್ವಿ ಆನ್ಲೈನ್ ಪ್ಲಾಟ್ ಫಾರಂನಿಂದ ಈಗ ಭೌತಿಕ ಮಳಿಗೆಗೆ ಪರಿವರ್ತನೆ ಕಾಣುತ್ತಿದೆ. ನಾವು ಬೆಂಗಳೂರು ಮತ್ತು ಹೊರಗಿನ ನಿವಾಸಿಗಳಿಗೆ ಆತ್ಮೀಯವಾಗಿ ಸ್ವಾಗತಿಸಲು ಉತ್ಸುಕರಾಗಿದ್ದೇವೆ, ಇಲ್ಲಿ ಪ್ರತಿ ಸೀರೆಯೂ ಒಂದು ಕಥೆ ಹೇಳುತ್ತದೆ ಮತ್ತು ಸೂಕ್ಷ್ಮ ವಿನ್ಯಾಸದ ಕೆಲಸದೊಂದಿಗೆ ನಮ್ಮ ವಸ್ತ್ರ ಪರಂಪರೆಯ ಸಮಯರಾಹಿತ್ಯವನ್ನು ಎತ್ತಿ ತೋರುತ್ತದೆ ಎಂದರು.
ವಿದ್ಯಾ ಬಾಲನ್ ಶೋಬಿತಂ ಪ್ರಯಾಣದ ಕುರಿತು ಅವರು ಮಾತನಾಡಿ, ನಾನು ನಿಜಕ್ಕೂ ಇಂದು ಶೋಬಿತಂ ಹೊಸ ಮಳಿಗೆಯ ಪ್ರಾರಂಭದ ಭಾಗವಾಗಿರುವುದು ಬಹಳ ಸಂತೋಷ ನೀಡಿದೆ. ನಾನು ಅವರ ಪ್ರಯಾಣವನ್ನು ಕಂಡಿದ್ದೇನೆ ಮತ್ತು ಅದರ ಭಾಗವಾಗಿದ್ದೇನೆ, ಆದ್ದರಿಂದ ನಮಗೆ ಅವರ ಪರಿಶ್ರಮವು ಫಲ ನೀಡುತ್ತಿರುವುದನ್ನು ಕಾಣುವುದು ಬಹಳ ಸಂತೋಷದ ಮತ್ತು ಭಾವನಾತ್ಮಕ ಕ್ಷಣವಾಗಿದೆ ಎಂದರು.