ದೇವನಹಳ್ಳಿ: 12 ನೇ ಶತಮಾನ ಸಮಸಮಾಜ ನಿರ್ಮಾಣದ ಕ್ರಾಂತಿಯೋಗಿಗಳು ಶರಣರ ಸಮಾಜಸುಧಾರಣೆಯ ಮುನ್ನುಡಿ ಬರೆದ ಶತಮಾನ ಬಸವಣ್ಣನವರ ಹಾದಿಯಲ್ಲಿ ನಡೆದ ಅನೇಕ ಶರಣರಲ್ಲಿ ಅಂಬಿಗರಚೌಡಯ್ಯನವರು ಮುಂಚೂಣಿಯಲ್ಲಿ ಸ್ಮರಿಸಬೇಕಾದ ಮಹಾಶರಣರು ಎಂದು ಅಂಬಿಗರ ಚೌಡಯ್ಯ ಯುವಕ ಸಂಘದ ಅದ್ಯಕ್ಷ ತಾಲುಕು ಡಿಎ.ಸತೀಶ ಹೇಳಿದರು
ದೇವನಹಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾಯಕ್ರಮದಲ್ಲಿ ಅವರ ಭಾವಚಿತ್ರ ಪೂಜಿಸಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಗಂಗಾಮತಸ್ಥ ಬೆಸ್ತಕುಲದಲ್ಲಿ ಜನಿಸಿ ಕಾಯಕದಲ್ಲಿ ಅಂಬಿಗನ ಕೆಲಸ ಮಾಡುತ್ತಾ ದೋಣಿ ನಡೆಸುತ್ತಾ ಬಸವಾದಿ ಶರಣರ ಸಂದೆಶಗಳನ್ನು ಪ್ರಪಂಚಕ್ಕೆ ಸಾರಿದ ಮಹಾತ್ಮರು ಚೌಡಯ್ಯನವರು ಅವರ ಹೆಸರಿನಲ್ಲಿ ಒಂದು ಭವನ ನಿರ್ಮಾಣಕ್ಕೆ ಆ ಸಮಾಜದವರು ಬೇಡಿಕೆಯನ್ನು ಪ್ರತಿ ವರ್ಷ ಸಲ್ಲಿಸುತ್ತಿದ್ದರೂ ಸಹ ಅಂಬಿಗರ ಚೌಡಯ್ಯನವರ ಸ್ಮಾರಕ ಭವನ ನಿರ್ಮಾರ್ಣಕ್ಕೆ ಸರ್ಕಾರ ಭೂಮಿ ಕೊಟ್ಟಿಲ್ಲ ಎಂದರು.
ನಮ್ಮ ಜನಾಂಗವನ್ನು ಗುರ್ತಿಸಿದವರು ಮೊದಲಿಗೆಮಾಜಿ ಪ್ರಧಾನಮಂತ್ರಿ ಎಚ್.ಡಿ..ದೇವೇಗೌಡರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮಸಮಾಜವನ್ನು ಎಸ್.ಟಿಗೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಇದು ಪ್ರಸ್ತಾಪವಾಗದೇ ಅದಿಕೃತವಾಗಬೇಕು ಈ ಇಬ್ಬರೂ ಸಹ ನಮ್ಮ ಸಮಾಜದಿಂದ ಅಭಿನಂದನಾರ್ಹರು ಎಂದರು. ಶ್ರೀರಾಮಮಂದಿರ ನಿರ್ಮಾಣದ 500 ವರ್ಷಗಳ ಕನಸು ನನಸಾಗಿ ಬಾಲರಾಮಮಂದಿರ ನಿರ್ಮಾಣವಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಮ್ಮ ದೇವಾಲಯದಲ್ಲಿ ಸೀತಾರಾಮರ ಭಾವಚಿತ್ರವಿರಿಸಿ ಎರಡು ದಿನ ನಿರಂತರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಲಾಡು ಪ್ರಸಾದ ವಿತರಣೆ, ಡಾ. ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಇಂದು ಅನ್ನದಾಸೋಹ ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗಂಗಾಮತಸ್ಥರ ಸಂಘದಅದ್ಯಕ್ಷ ರಾಮಾಂಜಿನಪ್ಪ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ, ಸದಸ್ಯರಾದ ಮೇಸ್ತ್ರಿ ಗೋಪಾಲಪ್ಪ, ರಾಮಣ್ಣ, ಮುನಿರಾಜು, ಮಂಜುನಾಥ್, ಮುನಿಕೃಷ್ಣಪ್ಪ,ಪುಟ್ಟರಾಜು, ರಾಘವೇಂದ್ರ, ವೆಂಕಟೇಶ್, ವೆಲ್ಡಿಂಗ್ಮುನಿರಾಜ, ರಾಜೇಶ ರವಿಕುಮಾರ, ಮನೋಜ,ಮಾಜಿ ಕಸಾಪ ತಾಲುಕು ಅಧ್ಯಕ್ಷ ನಾರಾಯಣಸ್ವಾಮಿ, ಉಪೇಂದ್ರ ಮುಂತಾದವರು ಇದ್ದರು.