ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆದಿದೆ. ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಇದಕ್ಕಾಗಿ ಪೂರ್ವಭಾವಿ ತಾಲೀಮು ನಡೆದಿದೆ. ಜ.26ರ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಆಚರಣೆಯೂ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ಕಣ್ಗಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬೆಂಗಳೂರು ನಗರದ ಎಲ್ಲಾ ಹೋಟೆಲ್ ಲಾಡ್ಜ್, ತಂಗುದಾಣ ಮತ್ತಿತರ ಸ್ಥಳಗಳಲ್ಲಿ ಅನುಮಾನ ಸ್ಥಳಗಳಲ್ಲಿ ವಾಸ್ತವ್ಯ ಹೂಡಿರುವವರ ಮೇಲೆ ನಿಗಾ ವಹಿಸಲಾಗಿದೆ.
ಇಂದು ಬೆಳಿಗ್ಗೆ ಮಾಣಿಕ್ ಷಾಪೆರೇಡ್ ಮೈದಾನದಲ್ಲಿ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಬಿ.
ದಯಾನಂದ ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಸುದ್ದಿಗಾರರಿಗೆ ಸಿದ್ಧತೆಗಳ ವಿವರ ನೀಡಿದರು.ಕಾರ್ಯಕ್ರಮ ನಡೆಯುವಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ, ಎಲ್ಲಾ ಪೊಲೀಸ್ ವಿಭಾಗಳಿಂದ 8 ಡಿಸಿಪಿ, 17 ಎಸಿಪಿ, 44 ಸರ್ಕಲ್ ಇನ್ಸ್ಪೆಕ್ಟರ್, 114 ಪಿಎಸ್ಐ, 58 ಎಎಸ್ಐ, ಎಚ್ಸಿಪಿಸಿ 551, ಮಹಿಳಾ ಪೊಲೀಸರು 80 ಸೇರಿದಂತೆ ಸಾದಾ ಉಡುಪಿನ 149 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತ್ತು 30 ಜನ ಕ್ಯಾಮೆರಾ ಸಿಬ್ಬಂದಿ ಸೇರಿ ಒಟ್ಟು 1051 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
10 ಕೆಎಸ್ಆರ್ಪಿ ಮತ್ತು ಸಿಎಆರ್ ಎರಡು ಅಗ್ನಿಶಾಮಕ ದಳ, 2 ಅಂಬ್ಯುಲೆನ್ಸ್ ಸೇರಿದಂತೆ ನಾಲ್ಕು ಖಾಲಿ ವಾಹನ, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆ, ಒಂದು ಡೀ ಸ್ಯಾಟ್ ಮತ್ತಿತರರೆ ಸಿಬ್ಬಂದಿಯನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ.ಮೈದಾನದ ಸುತ್ತ ಎಲ್ಲಾ ಚಲನವಲನಗಳನ್ನು ಸೂಕ್ಷ್ಮವಾಗಿ ನಿಗಾ ವಹಿಸಲು 103 ಸಿಸಿ ಟಿವಿಗಳನ್ನು ಮತ್ತು ಮೈದಾಣದಲ್ಲಿ ಆಗಮಿಸಿರುವ ತಪಾಸಣೆಗೆ ಮೂರು ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ಎಂಡಿ ಮತ್ತು 40 ಎಚ್ಎಚ್ ಎಂಡಿಗಳನ್ನು ಅಳವಡಿಸಲಾಗಿದೆ.
ಮೈದಾನದ ಸುತ್ತಮುತ್ತಲಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಸಂಬಂಧ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಲಾಗಿದೆ.ಬೆಳಿಗ್ಗೆ 8.30ರಿಂದ 10.30ರವರೆಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ನಿರ್ಬಂಧ ಹೇರಿರುವ ರಸ್ತೆಗಳ ವಿವರ ನೀಡಲಾಗಿದೆ. ಸಮಾರಂಭ ವೀಕ್ಷಿಸಲು ಆಗಮಿಸುವವರಿಗೆ ವಿವಿಧ ರೀತಿಯ ಬಣ್ಣದ ಪಾಸ್ಗಳನ್ನು ನೀಡಲಾಗಿದೆ.ಸಿಗರೇಟ್ ಬೆಂಕಿಪೊಟ್ಟಣ, ಕರಪತ್ರ, ಬಣ್ಣದ ಕರಪತ್ರ, ವಿಡೀಯೋ ಮತ್ತು ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್ ಹಾಗೂ ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ಚಾಕು, ಚೂರಿ, ಕಪ್ಪು ಕರ ವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲಿಗಳು, ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರುವವರ ಮೇಲೆ ನಿಗಾ ವಹಿಸಿ ಅವುಗಳ ನಿಷೇಧ ಹೇರಲಾಗಿದೆ.
ಗಣ್ಯ ವ್ಯಕ್ತಿಗಳು ಹಾಗು ಇಲಾಖೆ ಹಿರಿಯ ಅಧಿಕಾರಿಗಳಿಗಾಗಿ 1500 ಆಸನ ಇತರೆ ಎಲ್ಲಾ ಇಲಾಖೆಯ ಅಧಿಕಾರಿ ನಿವೃತ್ತ ಸೇನಾಧಿಕಾರಿಗಳು ಬಿಎಸ್ಎಫ್ ಅಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ 2000 ಆಸನ, ಸಾರ್ವಜನಿಕರಿಗಾಗಿ 3000 ಆಸನ ವ್ಯವಸ್ಥೆ ಮಾಡಲಾಗಿದೆ.ಸಮಾರಂಭ ಆರಂಭಕ್ಕೂ ಮುನ್ನ 10 ನಿಮಿಷಗಳ ಮುಂಚೆ ಆಹ್ವಾನಿತರು ತಮ್ಮ ಆಸನಗಳಲ್ಲಿ ಆಸೀನರಾಗಲು ಕೋರಲಾಗಿದೆ.