ಬೆಂಗಳೂರು: ಗನ್ ಲೈಸೆನ್ಸ್ ರದ್ದು ಅಥವಾ ಅಮಾನತ್ತು ಪಡಿಸುವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಟ ದರ್ಶನ್ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ರವರಿಗೆ ನನ್ನ ಗನ್ ಲೈಸೆನ್ಸ್ ಅನ್ನು ಅಮಾನತ್ತು ಮಾಡಬಾರದು ಎಂದು ಪತ್ರ ಬರೆದು ಮನವಿ ಮಾಡಿರುತ್ತಾರೆ.
ನಟ ದರ್ಶನ್ಗೆ ಪೊಲೀಸ್ ಕಮಿಷನರ್ ಕಚೇರಿಯಿಂದ ಗನ್ ಲೈಸೆನ್ಸ್ ರದ್ದುಪಡಿಸುವ ಪತ್ರ ರವಾನೆಯಾಗಿತ್ತು.ನನ್ನ ಜೀವ ರಕ್ಷಣೆಗೆ ಸಂಬಂಧಪಟ್ಟ ಹಾಗೆ ನಾನು ಖಾಸಗಿ ಸೆಕ್ಯೂರಿಟಿಯನ್ನು ನೇಮಿಸಿಕೊಂಡಿರುತ್ತೇನೆ ಆದ್ದರಿಂದ ನನ್ನ ಗನ್ ಲೈಸೆನ್ಸ್ ಅನ್ನು ರದ್ದು ಮಾಡಬಾರದೆಂದು ಮನವಿ ಮಾಡಿರುತ್ತಾರೆ.
ನಾನೊಬ್ಬ ಖ್ಯಾತ ಸಿನಿಮಾ ನಟ, ಇತ್ತೀಚಿಗೆ ನನ್ನ ಮೇಲೆ ಕೊಲೆ ಮೊಕದ್ದಮೆ ಕಾಮಾಕ್ಷಿಪಾಳ್ಯ ಪೊಲೀಸರು ದಾಖಲಿಸಿರುವ ಹಿನ್ನೆಲೆಯಲ್ಲಿ ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಒಡ್ಡುವುದಿಲ್ಲವೆಂದು ಸಹ ಪತ್ರದಲ್ಲಿ ಉಲ್ಲೇಖಿಸಿರುತ್ತಾರೆ.