ಬೆಳಗಾವಿ: ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ಡಿ.20ರಂದು ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಸುವರ್ಣ(33) ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೊಲೆಯಾದ ಸುವರ್ಣಳ ಭಾವ ಅಪ್ಪಯ್ಯ ಎಂಬುವರನ್ನು ಮಹಾರಾಷ್ಟ್ರದ ಮೀರಜ್ನಲ್ಲಿ ಬಂಧಿಸಿದ್ದಾರೆ.
ಕೊಲೆ ಆರೋಪಿಗೆ ಸುವರ್ಣ 50,000 ರೂ. ನೀಡಿದ್ದು, ಅದನ್ನು ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ವಾಪಸ್ ಹಣ ನೀಡಲು ಮುಂದದಾಗ ಆಕೆಯನ್ನು ಕೊಲೆ ಮಾಡಿದ್ದರೆ 50ಸಾವಿರ ರೂ. ಉಳಿಯುತ್ತೆ ಆಕೆಯ ಮೈಮೇಲೆ ಇರುವ ಒಡವೆಯೂ ಸಿಗುತ್ತದೆ ಎಂಬ ಆಸೆಗೆ ಸುವರ್ಣಾಳನನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ. ಸುವರ್ಣಾಳದ ಅಂತ್ಯಕ್ರಿಯೆ ವೇಳೆ ಕಂಡು ಬರದ ಅಪ್ಪಯ್ಯ ಮೇಲೆ ಅನುಮಾನಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೆರೆದಾಳದಿಂದ ಬಂದು ಕೊಲೆ ನಡೆಸಿದ್ದ ಎಂದು ತಿಳಿದುಬಂದಿದೆ.