ದೇವನಹಳ್ಳಿ: ಕನ್ನಮಂಗಲ ಗ್ರಾಮ ಪಂಚಾಯ್ತಿಯಿಂದ ಗಾಂಧಿ ಜಯಂತಿಪ್ರಯುಕ್ತ ವಿವಿಧ ಸೇವಾ ಕಾರ್ಯ ಕ್ರಮಗಳನ್ನು ಆಯೋಜಿಸಿದ್ದೇವೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರ ಶ್ರೀನಿವಾಸ್ ತಿಳಿಸಿದರು.ಅವರು ಕನ್ನಮಂಗಲ ಗ್ರಾಮಪಂಚಾಯ್ತಿ ವತಿಯಿಂದ ಕಛೇರಿಯಲ್ಲಿಮಹಾತ್ಮ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಮಾತನಾಡಿ ಗಾಂಧಿ ಜಯಂತಿಪ್ರಯುಕ್ತ ಅನೇಕ ಸೇವಾ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು,
ಕೆರೆಯ ಬಳಿ ಗಿಡಗಳನ್ನು ನೆಡುವುದು, ಗ್ರಾಮದಲ್ಲಿ ಸ್ವಚ್ಛತೆ ಮಾಡುವುದು, ಹಾಗೂ ಗ್ರಾಮದಲ್ಲಿರುವ ಬಡ ಜನರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ ವರ್ಷದಲ್ಲಿ ಕನಿಷ್ಠ 100ದಿನಗಳ ಉದ್ಯೋಗ ಖಾತರಿ ಬಗ್ಗೆ ಮನೆಮನೆಗೆ ತೆರಳಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು ಎಂದರು.
ಮನ್ರೇಗ ಯೋಜನೆಯಲ್ಲಿ ಮಹಿಳೆಯರಿರಬಹುದು ಪುರುಷರಿರಬಹುದು ಎಲ್ಲರಿಗೂ ಸಮಾನ ವೇತನ ನೀಡುವುದು, ದಿನಕ್ಕೆ 349 ರೂ.ಗಳನ್ನು ನೀಡಲು ಸರ್ಕಾರ ನಿಗದಿ ಪಡಿಸಿದೆ, ಜಾಬ್ ಕಾರ್ಡ್ ಮಾಡಿಸಿರುವ ಪ್ರತಿಯೊಬ್ಬರಿಗೂ ಉದ್ಯೋಗ ಖಾತರಿಯಡಿ ಕೆಲಸ ನೀಡಲಾಗುವುದು, ಗ್ರಾ.ಪಂಗೆ ನಮೂನೆ 6ರಲ್ಲಿ ಅರ್ಜೀ ಸಲ್ಲಿಸಿ,
15ದಿನಗಳಲ್ಲಿ ಕೋರಿದ ಕೆಲಸ ನೀಡಲಾಗುವುದು, ನಿಮ್ಮ ಮನೆಯಮುಂದೆ ಸ್ವಚ್ಚತೆಯಿರಬಹುದು, ಪಟ್ಟಿಯಲ್ಲಿ ರುವ ಉದ್ಯೋಗವನ್ನು ಮಾಡಿ ವೇತನ
ಪಡೆಯಬಹುದು, ನಿಮ್ಮ ಖಾತೆಗೆ ನೇರವಾಗಿ ಹಣ ಸಂಧಾಯವಾಗಲಿದೆ ಆದ್ದರಿಂದ ಗ್ರಾಮಸ್ತರು ಹೆಚ್ಚಿನ ಮಾಹಿತಿಗಾಗಿ ಪಂಚಾಯ್ತಿಗೆ ಬೇಟಿ ನೀಡಿ ಎಂದು ತಿಳಿಸಿದರು.ಈ ಸಮಯದಲ್ಲಿ ಪಂಚಾಯ್ತಿ ಸಿಬ್ಬಂದಿ ಹಾಗೂ ಗ್ರಾಮಸ್ತರು ಹಾಜರಿದ್ದರು.