ಬಂಗಾರಪೇಟೆ: ಅಕ್ಟೋಬರ್ 02, 1869 ರಂದು ಭಾರತದ ಗುಜರಾತ್ ರಾಜ್ಯದ ಪೋರಬಂದರ್ನಲ್ಲಿ ಜನಿಸಿದರು. ಮೋಹನದಾಸ್ ಕರಮಚಂದ್ ಗಾಂಧಿ ಅವರ ಪೂರ್ಣ ಹೆಸರು. ಆದರೆ ಅವರನ್ನು ನಾವೆಲ್ಲ ಮಹಾತ್ಮ ಗಾಂಧಿಯಾಗಿ, ಭಾರತ ದೇಶದ ರಾಷ್ಟ್ರಪಿತನಾಗಿ ಸ್ಮರಿಸುತ್ತಿದ್ದೇವೆ ಎಂದು ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಚಿಕ್ಕಂಕಂಡಹಳ್ಳಿ ಗ್ರಾ.ಪಂ.ನಲ್ಲಿ ಹಮ್ಮಿಕೊಂಡಿದ್ದ 155ನೇ ಗಾಂಧಿ ಜಯಂತಿ ಹಾಗೂ ವಿಶೇಷ ಗ್ರಾಮ ಸಭೆಗೆ ಉದ್ಘಾಟಿಸಿ ಮಾತನಾಡಿದ ಅವರು ನಾವು ಇಂದು ಗಾಂಧೀಜಿ ರವರ 155ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ ಎಂದರು.ಗಾಂಧೀಜಿ ಈ ದೇಶಕ್ಕೆ ನೀಡಿದ ಕೊಡುಗೆ, ಸಾಹಿತ್ಯ ಕೊಡುಗೆ, ತತ್ವಗಳು, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಿದ್ಧಾಂತಗಳು ಎಲ್ಲ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಇಂದು ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವಾಗಿ ಗಾಂಧಿ ಜಯಂತಿ ಎಂದು ಪ್ರತಿವರ್ಷ ಆಚರಣೆ ಮಾಡುತ್ತಿದ್ದೇವೆ ಎಂದರು.
ಪಿಡಿಒ ದೇವರಾಜ್ ಮಾತನಾಡಿ ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು ಎಂದು ಬಣ್ಣಿಸಿದರು, ಸದಸ್ಯರುಗಳು ನರೇಗಾ ಕಾಮಗಾರಿಗಳ ಬಗ್ಗೆ ಸದಸ್ಯರು ಪಟ್ಟಿ ಮಾಡಿ ಸಲ್ಲಿಸಲು ತಿಳಿಸಿದರು.
ಅಧ್ಯಕ್ಷೆ ಗಿರಿಜಮ್ಮ, ಮಾಜಿ ಅಧ್ಯಕ್ಷರಾದ ರವಿಕುಮಾರ್, ಸಿ.ಎಂ.ಹರೀಶ್ ಕುಮಾರ್ ರವರು ಮಾತನಾಡಿ ಗಾಂಧಿಜೀರವರ ಕನಸು ನನಸು ಮಾಡಲು ನಮ್ಮ ಮನೆ, ನಮ್ಮ ಗ್ರಾಮ ಸ್ವಚ್ಚಮಾಡಬೇಕು, ಶೌಚಾಲಯ ಬಳಕೆ ಕಡ್ಡಾಯವಾಗಿ ಆಗಬೇಕು, ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರುಗಳಾದ ಪ್ರಕಾಶ್ ಎಲ್ಲಾ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.