ಮೈಸೂರಿನ ವಿಧಾತ್ರಿ ಅರಸ್ ಅವರು ಇಲ್ಲಿನ ಕ್ಲೋವರ್ ಗ್ರೀನ್ಸ್ನಲ್ಲಿ ಶುಕ್ರವಾರ ಮುಕ್ತಾಯಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್ ಟೂರ್ನ ಒಂಬತ್ತನೇ ಲೆಗ್ನಲ್ಲಿ ವಿಜೇತರಾದರು. ವೃತ್ತಿಪರ ಗಾಲ್ಫರ್ ಆದ ನಂತರ ಇದು ಅವರ ಮೊದಲ ಪ್ರಶಸ್ತಿ.
ಅಮೆಚೂರ್ ಆಗಿ ಅವರು ಈ ಹಿಂದೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಾನ್ವಿ ಸೋಮು ಅವರು ಎರಡನೇ ಸ್ಥಾನ ಪಡೆದರು. ಅನುಭವಿ ಗಾಲ್ಫರ್ ಗೌರಿಕಾ ಬಿಷ್ಣೋಯಿ ಮೂರನೇ ಸ್ಥಾನ ಗಳಿಸಿದರು.
ವೃತ್ತಿಪರರಾದ ಮೇಲೆ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದರು. ಆದರೆ ಈ ಲೆಗ್ನ ಆರಂಭದಿಂದಲೇ ಉತ್ತಮ ನಿರ್ವಹಣೆ ತೋರಿದರು. ಖುಷಿ ಖಾನಿಜಾವು, ಶ್ವೇತಾ ಮಾನಸಿಂಗ್ ಮತ್ತು ಸ್ನೇಹಾ ಸಿಂಗ್ ನಾಳ್ಕನೇ ಸ್ಥಾನಕ್ಕೆ ಟೈ ಆದರು.ಮಹಿಳಾ ಪ್ರೊ ಗಾಲ್ಫ್ ಟೂರ್ನ ಹತ್ತನೇ ಲೆಗ್ ಇದೇ ತಿಂಗಳ 23 ರಿಂದ 26ರವರೆಗೆ ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ಶೈರ್ನಲ್ಲಿ ನಡೆಯಲಿದೆ.