ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ಚಿಕ್ಕ ಬಳ್ಳಾಪುರದಲ್ಲಿ ಶೂಟೌಟ್ ನಡೆದಿದ್ದು, ಚಿಕ್ಕಪ್ಪನಿಂದಲೇ ಅಣ್ಣನ ಮಗ ಬರ್ಬರ ಕೊಲೆಯಾಗಿರುವ ದಾರುಣ ಘಟನೆ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ.
ಪಿಸ್ತೂಲ್ನಿಂದ ಗುಂಡು ಹಾರಿಸಿ (೬೦) ನಜೀರ್ ಅಹ್ಮದ್ ಎಂಬಾತನನ್ನು ಆತನ ಚಿಕ್ಕಪ್ಪ ಬಶೀರ್ ಅಹ್ಮದ್ ಎಂಬಾತ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಬಶೀರ್ ಅಣ್ಣ ಮಾಬೂಸಾಬಿ ಎಂಬುವರ ಮೇಲೂ ಮಾರಕಾಸ್ತ್ರದಿಂದ ದಾಳಿ ಮಾಡಿದ್ದು,ಗಂಭೀರ ಗಾಯಗೊಂಡ ಮಾಬೂಸಾಬಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.
ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಶೀರ್ ಅಹ್ಮದ್ ಇತ್ತಿಚೀಗೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇನ್ನು ಬಶೀರ್ ಅಹ್ಮದ್ ಈ ಕೃತ್ಯ ಎಸಗಲು ನಿಖರ ಕಾರಣವೇನೆಂಬುವುದು ತಿಳಿದುಬಂದಿಲ್ಲ. ಸದ್ಯ ಬಶೀರ್ ಅಹ್ಮದ್ನನ್ನು ಗುಡಿಬಂಡೆ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.



