ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಿಶ್ವಕರ್ಮ ಸಮಾಜದಿಂದ ವಿಶ್ವಕರ್ಮ ಜಯಂತ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಹೆಚ್.ಎಂ.ಗಣೇಶ್ ಪ್ರಸಾದ್ ರವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ವಿಶ್ವಕರ್ಮರ ಮಹಾ ಸಂಘದ ಅಧ್ಯಕ್ಷರು ಹಾಗೂ ವಿಶ್ವಕರ್ಮ ನಿಗಮದ ಮಾಜಿ ಪ್ರಥಮ ಅಧ್ಯಕ್ಷರಾದ ಆರ್. ಶ್ರೀನಿವಾಸಚಾರ್ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ಪುರಸಭೆ ಅಧ್ಯಕ್ಷರು ಹಾಗೂ ಸಮಾಜದ ಹಿರಿಯ ಮುಖಂಡರಾದ ಪುಟ್ಟಸ್ವಾಮಚಾರ್, ಪ್ರಕಾಶ್,ದೇವಸ್ಥಾನದ ಅಧ್ಯಕ್ಷರಾದ ಮೂರ್ತಿ, ಯುವ ಮುಖಂಡರಾದ ಕುಮಾರ್, ನಂಜುಂಡಸ್ವಾಮಿ,
ಉಪಾಧ್ಯಾಯರಾದ ಶಿವಕುಮಾರ್, ಮಣಿಕಂಠ, ನಿಗಮದ ಮಾಜಿ ಸದಸ್ಯರಾದ ಮದು ಅಚಾರ್, ಬಂಗಾರು ಸ್ವಾಮಿ, ಮುಖ್ಯ ಭಾಷಣಕಾರ ವೆಂಕಟಾಚಲ ಮೂರ್ತಿ, ಬೇಗೂರು ಮಣಿ, ಮಂಜು, ಯುವಕರು, ವಿಶ್ವಕರ್ಮ ಕುಲಾಭಾಂಧವರೆಲ್ಲರೊ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಸಮಾಜದ ಬಹುದಿನಗಳ ಬೇಡಿಕೆಯಾದ “ಸಮುದಾಯ ಭವನ” ವನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.