ಬೆಂಗಳೂರು: ರಾಜಾಜಿನಗರ ಪ್ರವೇಶ ದ್ವಾರದ ಬಳಿ ಡಾ||ಶಿವಕುಮಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮತ್ತು ಭಕ್ತಿ ಸಮರ್ಪಣಾ ಸಮಾರಂಭ.
ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಗುರುವಣ್ಣ ದೇವರ ಮಠದ ಶ್ರೀನಂಜುಂಡಸ್ವಾಮಿಗಳು ಮತ್ತು ರಾಜ್ಯ ಬಿಜೆಪಿ ಮುಖಂಡರಾದ ಡಾ||ಅರುಣ್ ಸೋಮಣ್ಣ, ಕನ್ನಡ ಪರ ಹೋರಾಟಗಾರರಾದ ಪಾಲನೇತ್ರ, ಅಧ್ಯಕ್ಷರಾದ ಟಿ.ವೆಂಕಟೇಶ್ ಗೌಡ, ಉಪಾಧ್ಯಕ್ಷರಾದ ಕ್ರಾಂತಿರಾಜು, ಸಂಚಾಲಕರಾದ ಬಿ.ದೇವರಾಜ್, ಬಿಜೆಪಿ ಮುಖಂಡರುಗಳಾದ ರಮೇಶ್, ಸಿದ್ದಾರ್ಥ, ಶ್ರೀಮತಿ ರತ್ನಮ್ಮರವರು ರವರು ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಣೆ ಮಾಡಿದರು.
ಶ್ರೀನಂಜುಂಡ ಸ್ವಾಮೀಜಿ ಮಾತನಾಡಿ, ಗುರುವನ್ನ ಸ್ಮರಣೆ ಮಾಡುವ ದಿನವಾಗಿದೆ. ಶಿವಕುಮಾರ ಸ್ವಾಮೀಜಿಗಳ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಾಡಿನ ಜನರ ಪುಣ್ಯ. ಗುರುಗಳಾದ ಶಿವಕುಮಾರ ಸ್ವಾಮೀಜಿರವರು ಅನ್ನದಾಸೋಹ, ಶಿಕ್ಷಣ, ಕಾಯಕ ಮಹತ್ವವನ್ನು ವಿಶ್ವಕ್ಕೆ ಸಾರಿದರು.
ಭಕ್ತರು ಮತ್ತು ವಿಧ್ಯಾರ್ಥಿಗಳ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ಪ್ರತಿಯೊಬ್ಬರ ಬಾಳಿನಲ್ಲಿ ಗುರುಗಳು ಇಲ್ಲದೇ ಹರನನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಡಾ||ಅರುಣ್ ಸೋಮಣ್ಣರವರು ಮಾತನಾಡಿ, ಮಗುವಿಗೆ ತಂದೆ, ತಾಯಿ ಮೊದಲ ಗುರು ನಂತರ ಶಿಕ್ಷಣದಲ್ಲಿ ಪಾಠ ಕಲಿಸಿದ ಶಿಕ್ಷಕ ಗುರು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸ್ವಾಮೀಜಿಗಳ ಸಾನಿಧ್ಯ ಬೇಕು. ನಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶನದಲ್ಲಿ ಸಾಗಲು ಶ್ರಮಿಸಿದ ತಂದೆ, ತಾಯಿ ಮತ್ತು ಶಿಕ್ಷಕ ವೃಂದ ಮತ್ತು ಗುರುಗಳು, ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸುವ ದಿನವಾಗಿದೆ.
ಜೀವನದಲ್ಲಿ ಸಾಧನೆ ಮತ್ತು ಯಶ್ವಸಿ ಯಾಗಲು ಗುರುಗಳ ಸಹಕಾರ, ಪ್ರೋತ್ಸಹ ಪಾಲನೇತ್ರರವರು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂದರೆ ನಾವು ಮಾಡಿದ ಪಾಪ, ಪುಣ್ಯಗಳ ಕುರಿತು ಗುರುಗಳ ಬಳಿ ದೇವರು ಕೇಳುತ್ತಾರೆ ಗುರುಗಳು ನಮ್ಮ ಬಗ್ಗೆ ಏನು ಅಭಿಪ್ರಾಯ ನೀಡುತ್ತಾರೆ ಅದರ ಆನ್ವಯ ನಮಗೆ ಪುಣ್ಯಫಲ ಪ್ರಾಪ್ತಿಯಾಗುತ್ತಿದೆ ಪುರಾ ಣಗಳಲ್ಲಿ ಉಲ್ಲೇಖವಿದೆ. ತಂದೆ, ತಾಯಿ ನಂತರ ಗುರುಗಳ ನಮಗೆ ದೇವರಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬರು ಗುರುಗಳ ಮಾರ್ಗ ದರ್ಶನದಲ್ಲಿ ಸಾಗಿದಾಗ ಮಾತ್ರ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ ಎಂದರು.
ಟಿ.ವೆಂಕಟೇಶ್ ಗೌಡರವರು ಮಾತನಾಡಿ ಅನ್ನ,ಅಕ್ಷರ, ಆಶ್ರಯ ಮೂರನ್ನು ಮಕ್ಕಳಿಗೆ ದಯಪಾಲಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಕೃಪಾಶೀರ್ವಾದದಿಂದ ಲಕ್ಷಾಂತರ ಮಕ್ಕಳು ವಿದ್ಯಾವಂತರಾದರು ಅಂದು ಅವರಿಗೆ ಶಿಕ್ಷಣ ಸಿಗದೇ ಹೋಗಿದ್ದರೆ ರಾಜ್ಯದಲ್ಲಿ ಅವಿದ್ಯಾವಂತರ ಸಂಖ್ಯೆ ಹೆಚ್ಚು ಇರುತ್ತಿತ್ತು, ನಾಡು ಅಭಿವೃದ್ದಿಯಾಗುತ್ತಿರಲ್ಲಿಲ. ಶಿವ ಕುಮಾರ ಸ್ವಾಮೀಜಿ ಮಕ್ಕಳಿಗೆ ಗುರುವಾಗಿ ನಿಂತು ಅಕ್ಷರ ಕಲಿಸಿದರು, ಹಸಿದ ಮಕ್ಕಳಿಗೆ ಅನ್ನ ನೀಡಿದರು, ಸೂರು ಇಲ್ಲದ ಮಕ್ಕಳಿಗೆ ಆಶ್ರಯ ನೀಡಿದರು.
ಕ್ರಾಂತಿ ರಾಜುರವರು ಮಾತನಾಡಿ ಕ್ರಾಂತಿಯೋಗಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣಗುರು, ಜ್ಯೋತಿ ಬಾಪುಲೆ, ಕನಕದಾಸರು, ಶಿವಕುಮಾರಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಇಂತಹ ಮಹನೀಯರುಗಳನ್ನು ನಮ್ಮ ಮನಸ್ಸಿನಲ್ಲಿ ಗುರುಗಳಾಗಿ ಸ್ವೀಕಾರ ಮಾಡಿ, ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು. ಉತ್ತಮ ಸಮಾಜ, ವಿದ್ಯಾವಂತ ಸಮಾಜ ನಿರ್ಮಾಣವಾಗಲು ಗುರುಗಳ ಮಾರ್ಗದರ್ಶನ ಮುಖ್ಯ ಎಂದು ಹೇಳಿದರು.