ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಯ ರಾಗಿಮುದ್ದನಹಳ್ಳಿ ಗ್ರಾಮದಲ್ಲಿರುವ ಗುಲಾಬಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಾರಾಜ ಸಾಯಾಜಿರಾವ್ ಗಾಯಕ್ವಾಡ್ ರವರಿಂದ ಸ್ಥಾಪಿತ ವಾದ ಬ್ಯಾಂಕ್ ಆಫ್ ಬರೋಡ ಸ್ಥಾಪನ ಮಹೋತ್ಸವದ (ಜುಲೈ 20 , 1969 ) ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ, ರಾಗಿಮುದ್ದನಹಳ್ಳಿ ಶಾಖೆಯ ಮ್ಯಾನೇಜರ್ ಆದ ಶ್ರಿ ವಿನಾಯಕ್ ರವರು ನಮ್ಮ ಗುಲಾಬಿ ಶಾಲೆಯ ಮಕ್ಕಳಿಗೆ ಕ್ರೀಡೋಪಕರಣಗಳನ್ನು ವಿತರಿಸಿದರು. ಹಾಗೂ ಮಕ್ಕಳಲ್ಲಿ ದೈನಂದಿನ ಜೀವನದಲ್ಲಿ ಬ್ಯಾಂಕ್ ನ ಮಹತ್ವದ ಅರಿವನ್ನು ಮೂಡಿಸಿದರು. ಈ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಲ್ಲಿ ಪರಿಸರದ ಮಹತ್ವದ ಅರಿವು ಮೂಡಿಸುವ ಸಲುವಾಗಿ ಶ್ರೀಯುತರು ನಮ್ಮ ಗುಲಾಬಿ ಶಾಲೆಯ ಮ್ಯಾನೇಜರ್ ಹಾಗೂ ಪ್ರಾಂಶುಪಾಲರಾದ ವಂದನಿಯ ಗುರುಗಳಾದ ಶಿಜು, ರವರೊಂದಿಗೆ ಸೇರಿ ಗುಲಾಬಿ ವಿದ್ಯಾನಿಕೇತನ ಶಾಲೆಯ ಅಂಗಳದಲ್ಲಿ ಹಲವು ವಿಧದ ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಕ್ಯಾಷಿಯರ್ ಶ್ರೀ ಗೋಪಾಲ್, ಸಿಬ್ಬಂದಿಗಳಾದ ಬಾಲಾಜಿ, ವಿಶ್ವನಾಥ ಹಾಗೂ ವಿಜಯ್ ಕುಮಾರ್ ಮತ್ತು ನಮ್ಮ ಶಾಲೆಯ ಸ್ಟಾಫ್ ಸೆಕ್ರೆಟರಿ ಶ್ರಿಮತಿ ಮಮತ, ಪ್ರೌಢ ಶಾಲೆಯ ಸಂಯೋಜಕರಾದ ಶ್ರಿ ನಾಶೋನ್ ಮೊಮಿನ್, ದೈಹಿಕ ಶಿಕ್ಷಕರಾದ ಅಜೇಶ್ ಹಾಗೂ ನಮ್ಮ ಶಾಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಸಂತೋಷ್ Sಒ ರವರು ಉಪಸ್ಥಿತರಿದ್ದರು.