ಬೆಂಗಳೂರು ದಕ್ಷಿಣ: ದೇವಾಲಯಗಳ ನಿರ್ಮಾಣದಿಂದ ಗ್ರಾಮದಲ್ಲಿ ಸುಖ ಶಾಂತಿ, ನೆಮ್ಮದಿ ಹಾಗೂ ಸಂತೋಷ ಪ್ರಾಪ್ತಿಯಾಗುತ್ತದೆ ಎಂಬುದಾಗಿ ವಿಧಾನ ಪರಿಷತ್ತು ಸದಸ್ಯರಾದ ಗೋಪಿನಾಥ್ ರೆಡ್ಡಿ ತಿಳಿಸಿದರು.ಅವರು ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ದೇವಸ್ಥಾನದ ಆನುವಂಶಿ ಧರ್ಮದರ್ಶಿಗಳಾದ ಶ್ರೀಮತಿ, ಎನ್.ರಾಧಿಕಾ ಮತ್ತು ಶ್ರೀ.ಕೆ.ಆರ್. ಶ್ರೀಧರ ರೆಡ್ಡಿ ಕುಟುಂಬಸ್ಥರ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಸಿದ್ದಿ ವಿನಾಯಕ ದೇವಸ್ಥಾನ ಜೀರ್ಣೋದ್ಧಾರ, ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ವರ್ತೂರು ರಾಮಚಂದ್ರರೆಡ್ಡಿ ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಗೋಪಿನಾಥ್ ರೆಡ್ಡಿ ಇವರ ದಿವ್ಯಹಸ್ತದಲ್ಲಿ ಧಾನ್ಯ ಮಧ್ಯದಲ್ಲಿ ಹೊಂಬಾಳೆ ಪ್ರತಿಷ್ಠಾಪಿಸುವ ಮೂಲಕ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀಮತಿ ರಾಧಿಕಾ ಶ್ರೀಧರ ರೆಡ್ಡಿ ದಂಪತಿಗಳಿಗೆ ಶುಭವನ್ನು ಹಾರೈಸಿದರು.ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಆನುವಂಶಿ ಧರ್ಮದರ್ಶಿಗಳಾದ ಶ್ರೀಮತಿ, ಎನ್.ರಾಧಿಕಾ ಮತ್ತು ಶ್ರೀ.ಕೆ.ಆರ್. ಶ್ರೀಧರ ರೆಡ್ಡಿ ಕುಟುಂಬಸ್ಥರು ಭಾಗವಹಿಸಿದ್ದರು. ಬಿಜೆಪಿ ಹಿರಿಯ ಮುಖಂಡರಾದ ಬಿಟಿಎಂ ಮುತ್ತಪ್ಪ,ಕೋರಮಂಗಲ ಗೋವಿಂದರಾಜ್,ರಮೇಶ್ ರೆಡ್ಡಿ, ಮಾಜಿ ಬಿಬಿಎಂಪಿಸದಸ್ಯೆ ಸರಸ್ವತಮ್ಮ, ಸರಳ ಮಹೇಶ್ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪರಮ ಭಕ್ತರಾದ ಶ್ರೀಮತಿ ರಾಧಿಕಾ ಶ್ರೀಧರ ರೆಡ್ಡಿ ದಂಪತಿಗಳು ಸುಮಾರು 20ವರ್ಷಗಳಿಂದ ಶ್ರೀಸಿದ್ಧಿವಿನಾಯಕ ಸ್ವಾಮಿ ಮತ್ತು ನಾಗದೇವರ ಚಿಕ್ಕ ದೇವಾಲಯವನ್ನು ಗೊಲ್ಲಹಳ್ಳಿ ಎಂಬ ಸ್ಥಳದಲ್ಲಿ ನಿರ್ಮಾಣ ಮಾಡಿ ಆರಾಧನೆ ಮಾಡಿಕೊಂಡು ಬಂದಿದ್ದು ಕಾಲ ಕ್ರಮೇಣ ಶ್ರೀ ಸಿದ್ಧಿವಿನಾಯಕ ಸ್ವಾಮಿ ಮತ್ತು ನಾಗದೇವರ ಪ್ರೇರಣೆಯಿಂದ ಪ್ರಕೃತ ಶ್ರೀ ಸ್ವಾಮಿಗೆ ಅದೇ ಗೊಲ್ಲಹಳ್ಳಿಯಲ್ಲಿ ನೂತನ ಭವ್ಯ ಶಿಲಾಮಯ ದೇವಾಲಯ ನಿರ್ಮಾಣ ಮಾಡಿ ಇಂದು ಬುಧವಾರ ಮೀನ ಲಗ್ನ ಸುಮೂರ್ತದಲ್ಲಿ ಶ್ರೀ ಕೃಷ್ಣಭಟ್ ಜ್ಯೋತಿಷ್ಯ ಮಂಜೇಶ್ವರ ಇವರ ಸಹಭಾಗಿತ್ವ ದೊಂದಿಗೆ ಶ್ರೀಸಿದ್ಧಿವಿನಾಯಕ ಸ್ವಾಮಿ ,ನಾಗದೇವರ ಪ್ರತಿಷ್ಠಾವಿಧಿ ವಿಧಾನಗಳೊಂದಿಗೆ ವಿಜೃಂಭನೆಯಿಂದ ಬ್ರಹ್ಮಕಲಶಾಧಿಗಳು ನಡೆದವು ಎಂಬುದಾಗಿ ಪ್ರಧಾನ ಪುರೋಹಿತರಾದ ಕೃಷ್ಣಭಟ್ಟರು ತಿಳಿಸಿದರು.
ಪುರೋಹಿತರಾದ ಕೃಷ್ಣಭಟ್ಟರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿಗಳಿಂದ ಗೇಹ ಪರಿಗ್ರಹ, ಪುಣ್ಯಾಹ, ತೋರಣ ಮುಹೂರ್ತ, ಅರಣಿ ಮಥನ, ಆದ್ಯ ಷಣ್ಣಾರೀಕೇಲ ಗಣಯಾಗ, ರುದ್ರಹೋಮ, ಅಷ್ಟಬಂದ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ,ಐಕ್ಯಮತ್ಯ ಸೂಕ್ತ ಹೋಮ,ಮಹಾಗಣಪತಿ ಮೊದಕ ಸಹಸ್ರನಾಮ ಹೋಮ,ಶಕ್ತಿಪೂಜೆ, ಮಂತ್ರಾಕ್ಷತೆ ಹಾಗೂ ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಿತು.