ದೊಡ್ಡ ಸಿನಿಮಾಗಳ ಥ್ರಿಯೇಟ್ರಿಕಲ್ ರಿಲೀಸ್ ಮಾತ್ರವಲ್ಲ ಓಟಿಟಿ ಸ್ಟ್ರೀಮಿಂಗ್ ಕೂಡ ಬಹಳ ಕುತೂಹಲ ಮೂಡಿಸುತ್ತದೆ. ಕಾರಣ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದ ಬಹುತೇಕ ಮಂದಿ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸಿನಿಮಾ ನೋಡಲು ಕಾದು ಕೂತಿರುತ್ತಾರೆ. ತಮಿಳಿನ ‘ದಿ ಗ್ರೇಟೆಸ್ಟ್ ಆಫ್ ಆಲ್ಟೈಮ್’ ಸಿನಿಮಾ ಓಟಿಟಿ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು.
ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಅದನ್ನೆಲ್ಲಾ ಮೀರಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ವೆಂಕಟ್ ಪ್ರಭು ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಪ್ರಶಾಂತ್, ಪ್ರಭುದೇವ, ಸ್ನೇಹಾ, ಕೋಕಿಲ ಮೋಹನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 3ನೇ ವಾರ ಸಿನಿಮಾ ಬಾಕ್ಸಾಫೀಸ್ನಲ್ಲಿ ಡಲ್ ಆಗಿದೆ. ಈಗಾಗಲೇ ‘ಗೋಟ್’ ಸಿನಿಮಾ ವಿಶ್ವದಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಕಾಲಿವುಡ್ನಲ್ಲಿ ವಿಜಯ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ.
ಬೆಂಗಳೂರಿನಲ್ಲಿ ಕೂಡ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಅದೇನೋ ಗೊತ್ತಿಲ್ಲ ಇತ್ತೀಚೆಗೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ದಳಪತಿ ಚಿತ್ರಗಳು ಮುಗ್ಗರಿಸುತ್ತಿವೆ. The GOAT Trailer: ವಯಸ್ಸಾದ ಸಿಂಹದ ಘರ್ಜನೆಗೆ ದಾಖಲೆಗಳು ಧೂಳ್; ಕೊನೆ ಚಿತ್ರದಲ್ಲಿ ದಳಪತಿ ಡಬಲ್ ಧಮಾಕ ‘ಗೋಟ್’ ಸಿನಿಮಾ ಕೂಡ ದಳಪತಿ ಅಭಿಮಾನಿಗಳಿಗೆ ಇಷ್ಟವಾದರೆ ಉಳಿದವರಿಗೆ ರುಚಿಸಲಿಲ್ಲ.
ಇನ್ನು ತಂದೆ-ಮಗನಾಗಿ ಒಂದರ್ಥದಲ್ಲಿ ದ್ವಿಪಾತ್ರದಲ್ಲಿ ವಿಜಯ್ ತೆರೆಮೇಲೆ ಬಂದಿದ್ದರು. ಸಿದ್ದಾರ್ಥ್ ನುನಿ ಛಾಯಾಗ್ರಹಣ ಹಾಗೂ ಯುವನ್ ಶಂಕರ್ರಾಜಾ ಸಂಗೀತ ಚಿತ್ರಕ್ಕಿದೆ. ನಿವೃತ್ತಿ ಬಳಿಕ ಸಾಮಾನ್ಯ ಜೀವನ ನಡೆಸಲು ಆತ ನಿರ್ಧರಿಸಿರುತ್ತಾರೆ. ‘ಗೋಟ್’ ಸಿನಿಮಾ ಕಾಲಾವಧಿ 3 ಗಂಟೆ ದಾಟಿತ್ತು. ಇನ್ನು 18 ನಿಮಿಷ ಹೆಚ್ಚು ಸನ್ನಿವೇಶವನ್ನು ಚಿತ್ರತಂಡ ಸೆರೆ ಹಿಡಿದಿತ್ತು. ಕಾಲಾವಧಿ ಜಾಸ್ತಿ ಆಯ್ತು ಎನ್ನುವ ಕಾರಣಕ್ಕೆ ಕಟ್ ಮಾಡಿ 3 ಗಂಟೆ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ.