ತ್ರಿಶೂಲ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ತೆರೆಕಂಡು ನೂರು ದಿನಗಳಾಗಿದೆ.
ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ನೂರುದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಸಂತಸದ ವಿಚಾರ.ಕರ್ನಾಟಕದ ನಾಲ್ಕು ಕಡೆ ಈ ಚಿತ್ರ ನೂರುದಿನಗಳ ಪ್ರದರ್ಶನ ಕಂಡಿದೆ. ಈಗಲೂ ಪ್ರದರ್ಶನವಾಗುತ್ತಿದೆ.
ಚಿತ್ರವನ್ನು ಯಶಸ್ವಿ ಮಾಡಿದ ಕನ್ನಡ ಕಲಾಭಿಮಾನಿಗಳಿಗೆ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ಗಣೇಶ್ ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಈ ಚಿತ್ರದ ಹಾಡಗಳಂತೂ ಬಹಳ ಜನಪ್ರಿಯ ವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಟ್ರೆಂಡಿಂಗ್ ನಲ್ಲಿದೆ.