ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾದ ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಮಹಾನ್ ಚೇತನ ಮಾಜಿ ಪ್ರಧಾನಿ, ಅಪ್ರತಿಮ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ರವರಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರ ಕಾಂಗ್ರೆಸ್ ಕಚೇರಿಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಡಿ. ಉಮಾಶಂಕರ್ ರವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯ ಡಿ. ಉಮಾಶಂಕರ್, ಗೋವಿಂದರಾಜನಗರ ಬ್ಲಾಕ್ ಪದಾಧಿಕಾರಿಗಳಾದ ಚಿಕ್ಕಣ್ಣ, ಗುರುಶಂಕರ್, ಮಾಜಿ ನಿರ್ದೇಶಕ ಕೆ. ಕೃಷ್ಣ, ಕೃಷ್ಣಮೂರ್ತಿ, ನಾಗಣ್ಣ, ಹನುಮಂತು ಸ್ಥಳೀಯ ಮುಖಂಡರಾದ ಬಸವರಾಜಣ್ಣ, ನಾಗರಾಜ್ ಗೋವಿಂದರಾಜನಗರ ಐಎನ್ ಟಿಯುಸಿ ಅಧ್ಯಕ್ಷ ರ. ನರಸಿಂಹಮೂರ್ತಿ ಮತ್ತಿತರರು ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಮನ ಸಲ್ಲಿಸಿದರು.