ಬೊಮ್ಮನಹಳ್ಳಿ: ಧಾರ್ಮಿಕ ಕಾರ್ಯಗಳನ್ನು ಶ್ರದ್ಧೆಯಿಂದ ಹಾಗೂ ಭಕ್ತಿಪೂರ್ವಕವಾಗಿ ಮಾಡಿದಾಗ ಪುಣ್ಯಫಲವು ಪ್ರಾಪ್ತಿಯಾಗುತ್ತದೆ ಎಂಬುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲೆಯ ಹರಿಹರ ರೆಡ್ಡಿ ಗುರುಪೀಠದ ಮಹಾಸ್ಬಾಮಿ ವೇಮನಾನಂದ ಸ್ವಾಮಿ ತಿಳಿಸಿದರು.
ಅವರು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಗೋವಿಂದ ಶೆಟ್ಟಿಪಾಳ್ಯದಲ್ಲಿ ನೂತನ ದೇವಾಲಯ, ಶಿಲಾವಿಗ್ರಹ, ವಿಮಾನಗೋಪುರ ಹಾಗೂ 29 ಅಡಿ ಎತ್ತರದ ಅಭಯ ಆಂಜನೇಯ ಸ್ವಾಮಿ ಮೂರ್ತಿ ಮತ್ತು ಧ್ವಜಸ್ಥಂಭ ಅಷ್ಠಬಂಧನಾ ಪ್ರತಿಷ್ಠಾಪನಾ, ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗೋವಿಂದಶೆಟ್ಟಿಪಾಳ್ಯದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ಸೇವಾಕರ್ತ ಟ್ರಸ್ಟಿಗಳಾದ ಸಿಎಸ್ ಆರ್ ಚಂದ್ರಶೇಖರ್ ಮಾತನಾಡುತ್ತ ಬೆಂಗಳೂರಿನ (ಕಲ್ಯಾಣ ನಗರಿ) ಸುಪ್ರಸಿದ್ಧ ಗ್ರಾಮ ಗೋವಿಂದಶೆಟ್ಟಿ ಪಾಳ್ಯ ಆಗಿದೆ, ಅನಾದಿಕಾಲದಿಂದ ಗ್ರಾಮಸ್ಥರಿಗೆ, ಭಕ್ತಾದಿಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತನ್ನ ಅಭಯ ಕೃಪಾಕಟಾಕ್ಷವನ್ನು ನೀಡುತ್ತಿರುವ ಶ್ರೀ ವೀರಾಂಜನೆಯ ಸ್ವಾಮಿ ಹಾಗೂ ತುಂಬಾ ಮಹಿಮೆ ಇರುವಂತ ದೇವಾಲಯವಾಗಿದೆ ಈ ದೇವಾಲಯ ಶಿಥಿಲ ವಾಗಿರುವುದನ್ನು ಕಂಡು ಗ್ರಾಮಸ್ಥರು ಭಕ್ತರ ಸಹಾಯದಿಂದ ಸುಂದರ ದೇವಾಲಯ ನಿರ್ಮಿಸಿ, 29 ಅಡಿ ಎತ್ತರದ ಅಭಯ ಆಂಜನೇಯಸ್ವಾಮಿ ಮೂರ್ತಿಯನ್ನು ಹಾಗೂ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ ಎಂದರು.
ಇದೇ ವೇಳೆ ಶ್ರೀಮಹಾಗಣಪತಿ ಪ್ರಾರ್ಥನೆ, ಮೂಲದೇವರ ಪ್ರಾರ್ಥನೆ, ಗೋಪೂಜೆ, ಗಂಗೆಪೂಜೆ, ಸಭಾ ಪ್ರಾರ್ಥನೆ, ಯಾಗಶಾಲೆ ಪ್ರವೇಶ, ಸ್ವಸ್ತಿ ವಾಚನ, ಪುಣ್ಯಾಹ, ದೇವತಾ ನಾಂದಿ, ಋತ್ವಿಕ್ ಸ್ವರ್ಣ, ರಕ್ಷಾಬಂಧನ, ಪಂಚಗವ್ಯ ಬಿಂಬಶುದ್ಧಿ, ಜಲಾಧಿವಾಸ, ಕ್ರಮಾರ್ಚನೆ, ಗೋಪುರ ಕಲಶ ಹಾಗೂ “ಉತ್ಸವ ಮೂರ್ತಿ ಗ್ರಾಮ ಪ್ರದಕ್ಷಿಣೆ”ರತ್ನನ್ಯಾಸ, ಯಂತ್ರ ಸ್ಥಾಪನೆ, ಅಷ್ಠಬಂಧನ, ತೀರ್ಥ-ಪ್ರಸಾದ ವಿನಿಯೋಗಸೂರ್ಯ ನಮಸ್ಕಾರ, ಜಪ-ಪಾರಾಯಣ, ಅಗ್ನಿ ಪ್ರತಿಷ್ಠಾಪನಾ ಪೂರ್ವಕ ಕಲಶ ಸ್ಥಾಪನೆ.ಧನುರ್ಲಗ್ನದಲ್ಲಿ ಕಳಾಹೋಮ, ನಾಡಿ ಸಂಧಾನ ಕಳಾವಾಹನ, ” ಜೀವನ್ಯಾಸ ಪೂರ್ವಕ ಪ್ರಾಣ ಪ್ರತಿಷ್ಠೆ”, ಪವಮಾನ ಹೋಮ, ಮೂಲಮಂತ್ರ ಹೋಮ, ಮಹಾನಿರಿಕ್ಷಣೆ, ಮಹಾಬಲಿ ಹರಣ, ಗೋ, ಧಾನ್ಯ, ದರ್ಪಣ, ಅಗ್ನಿ, ದರ್ಶನ, ಪೂರ್ಣಾಹುತಿ “ಕುಂಭಾಭಿಷೇಕ”.ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಋತ್ವಿಕ್ ಪೂಜೆ, ಅನ್ನಸಂತರ್ಪಣೆ ಮಾಡಲಾಯಿತು.
ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ, ತನು ಮನ ಧನ-ಧಾನ್ಯಾದಿಗಳನ್ನುನೀಡುವ ಮೂಲಕ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿ, ಪುನೀತರಾದರು.ಇದೇ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯವನ್ನು ಶಿವಸಿದ್ದೇಶ್ವರ ಸ್ವಾಮಿಗಳು ಕಿರಿಯ ಶ್ರೀಗಳು ಶ್ರೀ ಸಿದ್ದಗಂಗಾಮಠ, ದಿವ್ಯ ಉಪಸ್ಥಿತಿಯನ್ನು ಶ್ರೀ ವಿನಯ್ ಗುರೂಜಿ ಗೌರಿಗದ್ದೆ, ಶ್ರೀ ಶ್ರೀ ಶ್ರೀ ವಿಧ್ಯಾವಾಚಸ್ಪತಿ ವಿಶ್ವಸಂತೋಷ ಭಾರತೀ ಶ್ರೀ ಪಾದರು, ಶ್ರೀ ಅಯ್ಯಪ್ಪಸ್ವಾಮಿ ಪೀಠಾಧಿಪತಿಗಳು, ಆಯುರ್ ಆಶ್ರಮ, ಬೆಂಗಳೂರು, ಮುಖ್ಯ ಅತಿಥಿಗಳಾದ ಶಾಸಕರಾದ ಎಂ. ಕೃಷ್ಣಪ್ಪ ಎಂ..ಸತೀಶ್ ರೆಡ್ಡಿ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಧರ್ ರೆಡ್ಡಿ, ಮುಖಂಡರಾದ ಆನಂದ್ ರೆಡ್ಡಿ, ಗೋವಿಂದಶೆಟ್ಟಿಪಾಳ್ಯದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ಸೇವಾಕರ್ತ ಟ್ರಸ್ಟಿಗಳಾದ ಸಿಎಸ್ ಆರ್ ಚಂದ್ರಶೇಖರ್, ಕೇಬಲ್ ಅನಂದ್ ಬಾಬಾಣ್ಣ,ಪ್ರಮೋದ್,ವೆಂಕಟೇಶ, ಜಗನ್ನಾಥ್ ರೆಡ್ಡಿ, ಗುರುಮೂರ್ತಿ ರೆಡ್ಡಿ, ಶ್ರೀನಿವಾಸ್ ರೆಡ್ಡಿ ,ರಾಜಪ್ಪರೆಡ್ಡಿ ಸೇರಿದಂತೆ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ಕಾರ್ಯಕರ್ತರು ಹಾಗೂ ಯುವಕರು ಹಾಜರಿದ್ದರು.