ದೇವನಹಳ್ಳಿ: ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಗ್ಯಾಸ್ ಸಿಲಿಂಡರ್ ನ ಸುರಕ್ಷತೆಗಾಗಿ, ಗ್ಯಾಸ್ ಪೈಪ್ನ ಮುಕ್ತಾಯದ ದಿನಾಂಕವನ್ನು ಪರಿಶೀಲಿಸುವುದು ಕೂಡ ಮುಖ್ಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಿಲಿಂಡರ್ ಸಿಡಿಯುವ ಅಪಾಯ ವಿದೆ. ಚೇತನ್ ಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಪೌಂಡೇ ಷನ್ ವತಿಯಿಂದ ಗ್ಯಾಸ್ ಖರೀದಿ ಮಾಡುವ ಗ್ರಾಹಕರು ಬಯೋ ಮೆಟ್ರಿಕ್ ಮೂಲಕ ಪಡೆದರೆ ಗ್ಯಾಸ್ ರೀ ಫಿಲ್ಲಿಂಗ್ ತಡೆಗಟ್ಟುವಹಾಗೂ ಅನಾಹುತ ತಡೆಗಟ್ಟುಲು ಜನ ಜಾಗೃತಿ ಅಭಿಯಾನ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದರು.ಗ್ರಾಹಕ ದಕ್ಷತಾ ಕಲ್ಯಾಣ ಪೌಂಡೇಷನ್ ನ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಗ್ಯಾಸ್ ಅವಗಡಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ತಿಳಿಯದೇ ರೀ ಫಿಲಿಂಗ್ ಮತ್ತು ಮನೆ ಸಿಲಿಂಡರ್ ನ್ನು ವಾಣಿಜ್ಯ ಸಿಲಿಂಡರ್ ಆಗಿ ಬಳಸುತ್ತಿದ್ದಾರೆ,
ಕಾರು ಆಟೋ, ಹಾಗೂ ಟೀ ಅಂಗಡಿ ಹೋಟೆಲ್ ಗಳಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಗ್ಯಾಸ್ಏಜೆನ್ಸಿಗಳೇ ಇದಕ್ಕೆಲ್ಲಾ ಕುಮ್ಮಕ್ಕು ನೀಡಿ ಅವಗಡ ಗಳಿಗೆ ಕಾರಣರಾಗುತ್ತಿದ್ದಾರೆ. ಪ್ರತಿ ವರ್ಷಕ್ಕೆ ಒಂದುಕುಟುಂಬ ಬಳಸುವುದು 6-7 ಸಿಲಿಂಡರ್ ಉಳಿದಂತೆಏಜೆನ್ಸಿಯವರೇ ಬುಕ್ ಮಾಡಿ ಬಳಸುತ್ತಿದ್ದಾರೆ ಗ್ರಾಹಕರಿಗೆ ತಿಳಿಯುತ್ತಿಲ್ಲಾ. ಪ್ರಧಾನಿಗಳು ನೀಡಿರುವ ಉಜ್ವಲ ಯೋಜನೆಯಡಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮತ್ತು ಕಡಿಮೆ ಜಿ.ಎಸ್.ಟಿ. ಲೆಕ್ಕದಲ್ಲಿ ದೊರೆಯುತ್ತಿದೆ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಅಧಿಕಾರಿಗಳು ಮತ್ತು ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಪೌಂಡೇ ಷನ್ ಆಡಳಿತಾಧಿಕಾರಿ ಪ್ರಶಾಂತ್, ಉತ್ತರ ಕರ್ನಾಟಕ ಮುಖ್ಯಸ್ಥ ಅರುಣ್ ಮಾಂಗಾವೆ, ತಮಿಳುನಾಡು ಪಿ.ಆರ್.ಓ ಮುತ್ತು ರಾಜ್ ಸೇರಿದಂತೆ ಇತರರು ಇದ್ದರು.