ಬೆಂಗಳೂರು: ಅಕ್ಷರ ಫೌಂಡೇಷನ್ ಒಂದು, ಸ್ವಯಂಸೇವಾ ಸಂಸ್ಥೆಯಾಗಿದ್ದು ತನ್ನ 25 ವರ್ಷಗಳನ್ನು ಸಂಭ್ರಮಿಸುತ್ತಿದ್ದು `ಪ್ರತಿ ಮಗುವೂ ಶಾಲೆಯಲ್ಲಿದ್ದು ಮತ್ತು ಚೆನ್ನಾಗಿ ಕಲಿಯುತ್ತಿರಲಿ’ ಎಂಬ ಧ್ಯೇಯೋಧ್ಧೇಶವನ್ನು ದೃಢೀಕರಿಸಲು ಬದ್ಧವಾಗಿದ್ದು, 2024-25 ಗ್ರಾಮ ಪಂಚಾಯಿತಿ ಮಟ್ಟದ ಗಣಿತದ ಸ್ಪರ್ಧೆಗಳನ್ನು ಆಯೋಜಿಸಿದೆ.
ಗಣಿತ ಕಲಿಕಾ ಆಂದೋಲನದ (ಉಏಂ) ಅಡಿಯಲ್ಲಿ ಗಣಿತ ಕಲಿಕೆಗೆ ಕರ್ನಾಟಕ ಸರ್ಕಾರ ಬೆಂಬಲ ನೀಡಿದೆ. ಅಕ್ಷರ ಫೌಂಡೇಷನ್ ಕೆಲ ವರ್ಷಗಳಿಂದ ಗ್ರಾಮ ಪಂಚಾಯಿತಿ ಮಟ್ಟದ ಗಣಿತದ ಸ್ಪರ್ಧೆಗಳ ಮೂಲಕ ಸಮುದಾಯ-ಪ್ರೇರಿತ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದೆ. ಈ ಸ್ಪರ್ಧೆಗಳು ಗ್ರಾಮೀಣ ಸಮುದಾಯಗಳಲ್ಲಿ ಮಹತ್ತರ ಕಾರ್ಯಕ್ರಮಗಳಾಗಿದ್ದು, 4,5 ಮತ್ತು 6ನೇ ತರಗತಿಯ ಮಕ್ಕಳಲ್ಲಿನ ಪ್ರಸ್ತುತದ ಗಣಿತ ಕಲಿಕೆಯ ಮಟ್ಟಗಳನ್ನು ಪಾರದರ್ಶಕ ಮೌಲ್ಯಮಾಪನ ಮಾಡುತ್ತವೆ.
ಅಕ್ಷರ ಫೌಂಡೇಷನ್ ಅಧ್ಯಕ್ಷರಾದ ಅಶೋಕ್ ಕಾಮತ್ ಅವರು, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಗ್ರಾಮೀಣ ಕರ್ನಾಟಕದಲ್ಲಿ ಗಣಿತದ ಕಲಿಕೆ ಮತ್ತು ಸಕ್ರಿಯವಾಗಿ ಲಭ್ಯವಾಗುವಂತೆ ಅನುಕೂಲಗಳನ್ನು ಸೃಷ್ಟಿಸಲು ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಂಸ್ಥಾಪಕ ಟ್ರಸ್ಟಿಗಳಾದ ರೋಹಿಣಿ ನಿಲೇಕಣಿ, ಮದಕರ್ ಸಿವಿ, ಆಕ್ಸೆಂಚರ್ನ ಮಾಜಿ ಸಿಇಒ ರೇಖಾ ಮೆನನ್, ಮಾಜಿ ಲೋಕಾಯುಕ್ತ ಸಂತೋμï ಹೆಗ್ಡೆ, ಆರ್ಟಿಡಿ ಐಎಎಸ್ ಬಾಳಿಗಾ ಪಿವಿ, ಟ್ರಸ್ಟಿ ಸುಜ್ಜಾನೆ ಸಿಂಗ್, ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಇದ್ದರು.