ತಿ. ನರಸೀಪುರ: ಗ್ರಾಮೀಣ ಪ್ರದೇಶದ ಬಡ ಜನರ ಆರೋಗ್ಯವನ್ನು ಸುಧಾರಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಾದಿಗಳ್ಳಿ ಗ್ರಾಮದ ಹಾಲು ಉತ್ಪಾದಕರ ಮತ್ತು ಗ್ರಾಮದ ಜನತೆ ಸಹಕಾರದಿಂದ ಮಾದಿಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ನಮ್ಮ ಹಾಲು ಉತ್ಪಾದಕರು ಮತ್ತು ಗ್ರಾಮದ ಜನತೆಗೆ ಉಪಯೋಗ ಆಗುವಂತಹ ಕೆಲಸ ಆಗಬೇಕು ಎಂಬುದು ನಮ್ಮ ಡೈರಿ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದೇವೆ ಎಂದು ಮಾದಿಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಆರ್.ಸುಹಾಸ್ ತಿಳಿಸಿದರು.
ತಾಲ್ಲೂಕಿನ ಬನ್ನೂರು ಹೋಬಳಿ ಮಾದಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಮಾದಿಗಳ್ಳಿ, ಸತ್ಯಸಾಯಿ ಸಂಸ್ಥೆ, ಅಶ್ವಿನಿ ಪೂರ್ಣಸಾಯಿ ಮೆಡಿಕಲ್ ಆಸ್ಪತ್ರೆ, ನಾರಾಯಣ ಆಸ್ಪತ್ರೆ ಮೈಸೂರು, ಡಾ.ಪ್ರಕಾಶ್ ಮಾದಿಗಳ್ಳಿ, ವಿವೇಕಾನಂದ ಕ್ಲಿನಿಕ್ ಬನ್ನೂರು ರವರ ಸಹಾಯದೊಂದಿಗೆ ಆಯೋಜನೆ ಮಾಡಿದ್ದ ಉಚಿತ ಆರೋಗ್ಯ ತಪಾಸಣೆಶಿಬಿರಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಬಹಳ ಜನರು ಆರೋಗ್ಯದ ಕಡೆ ಗಮನಹರಿಸದೆ ಉದಾಸೀನತೆ ತೋರುತ್ತಾರೆ.
ಆರ್ಥಿಕ ತೊಂದರೆಯಿಂದ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಸುತ್ತಮುತ್ತಲ ಗ್ರಾಮದ ಜನರ ಅನುಕೂಲಕ್ಕಾಗಿ ಶಿಬಿರವನ್ನು ಹಮ್ಮಿಕೊಂಡಿದ್ದೆವು ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಂಡಿದ್ದಾರೆ. ಈ ದಿನಗಳಲ್ಲೂ ಸಹ ನಮ್ಮ ಗ್ರಾಮದ ಜನತೆಗೆ ಅನುಕೂಲವಾಗಲು ನಾನು ಸದಾ ಸಹಕರಿಸುತ್ತೇನೆ ಎಂದರು.
ಡಾ. ಪ್ರಕಾಶ್ ಮಾತನಾಡಿ ಈ ಶಿಬಿರದಲ್ಲಿ, ನರರೋಗ,ಕಿವಿ ಮೂಗು ಗಂಟಲು, ಪ್ರಸೂತಿ, ಮೂಳೆ, ಮಕ್ಕಳು, ನೇತ್ರ ತಜ್ಞರಗಳು ಗ್ರಾಮಕ್ಕೆ ಆಗಮಿಸಿ ತಪಾಸಣೆ ಮಾಡಿ. ಕಾಯಿಲೆಗೆ ಸಂಬಂಧಪಟ್ಟ ಉಚಿತ ಔಷಧಿಗಳು ನೀಡಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದಿರುವ ರೋಗಿಗಳಿಗೆ ಮಂಡ್ಯ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಚಿಕಿತ್ಸೆ ಮಾಡಿ. ಮತ್ತೆ ಕರೆದುಕೊಂಡು ಅವರ ಮನೆಗೆ ಬಿಡಲಾಗುವುದು. ಇದರಿಂದ 25 ಮಂದಿ ಜನರಿಗೆ ದೃಷ್ಟಿ ಬಂದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಕ್ಲಿನಿಕ್ ನ ಡಾ. ಪ್ರಕಾಶ್ ಮಾದಿಗಹಳ್ಳಿ, ಶ್ರೀ ಸತ್ಯಸಾಯಿ ಸಂಸ್ಥೆಯ ಶ್ರೀನಿವಾಸ ಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಕುಮಾರ್,ಕಾರ್ಯದರ್ಶಿಯಾದ ರಮೇಶ್, ಹಾಲು ಪರೀಕ್ಷಕರಾದ ಸೋಮೇಗೌಡ, ಗ್ರಾಮದ ಯುವ ಮುಖಂಡರಾದ ಸಂತೋಷ್,ಉಮೇಶ್, ಆಕಾಶ್, ಮನು ರುದ್ರ, ನೇತ್ರ ಪರೀಕ್ಷೆ ಅಧಿಕಾರಿ ರಂಗಸ್ವಾಮಿ ಹಾಗೂ ಸಾಯಿಬಾಬಾ ಸಂಸ್ಥೆ, ಅಶ್ವಿನಿ ಪೂರ್ಣ ಸಾಯಿ ಮೆಡಿಕಲ್. ನಾರಾಯಣ ಆಸ್ಪತ್ರೆಯ. ವೈದ್ಯರು, ಸಿಬ್ಬಂದಿಗಳು ಸಮಾಜ ಸೇವಕರು. ಹಾಗೂ ಗ್ರಾಮಸ್ಥರು ಹಾಜರಿದ್ದರು.