ಎಂ ಎನ್ ಕೋಟೆ: ಗುಬ್ಬಿ ತಾಲ್ಲೂಕಿನ ಎಂಎನ್ ಕೊಟೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಯ್ಯ ಅಧ್ಯಕ್ಷತೆಯಲ್ಲಿ ನಡೆಯಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಯ್ಯ ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಸದಸ್ಯರು ಕೈ ಜೋಡಿಸಿದಾಗ ಮಾತ್ರ ಗ್ರಾಮ ಪಂಚಾಯಿತಿ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೆಲಸ ಮಾಡಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸಾಕಷ್ವು ಸಮಸ್ಯೆಗಳು ಇದ್ದರು ಕೂಡ ಎಲ್ಲವನ್ನು ಬಗೆಹರಿಸೊಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪ ಕುಡಿಯುವ ನೀರು ಹಾಗೂ ಚರಂಡಿಗಳನ್ನು ಸ್ವಚ್ಚಗೊಳಿಸುತ್ತೇವೆ.ಎಲ್ಲ ಹಳ್ಳಿಗಳಲ್ಲೂ ಕೂಡ ಸ್ವಚ್ಷತೆ ಕಾಪಾಡಬೇಕಿದೆ.ಸಂಕ್ರಾಮೀಕ ರೋಗಗಳು ಹರಡುವ ಬೀತಿಯಲ್ಲಿ ಜನರು ಇದ್ದಾರೆ.ಸಾಕಷ್ವು ಫೋನ್ ಕರೆಗಳು ಬಂದಿದ್ದು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ಕೂಡ ಸ್ವಚ್ಚತೆಯನ್ನು ಕಾಪಾಡುತ್ತೀದೆವೆ ಸದಸ್ಯರು ಯಾವುದೇ ಸಮಸ್ಯೆ ಇದ್ದರೂ ಚರ್ಚಿಸಿ ಬಗೆಹರಿಸಕೊಳಬೇಕು ಎಂದು ತಿಳಿಸಿದರು.
ನರೇಗಾ ಯೋಜನೆಗೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು.ಈಗಾಗಲೇ ನರೇಗಾ ಯೋಜನೆಯಲ್ಲಿ ಕೆಲಸ ಚನ್ನಾಗಿ ಮಾಡಿದ್ದಾರೆ.ಅದೇ ರೀತಿ ಮುಂದೆಯು ನರೇಗಾ ಯೋಜನೆ ಮಾಡಬೇಕು ಎಂದರು.ಸಭೆಯಲ್ಲಿ ಸದಸ್ಯರು ಸಾಕಷ್ವು ವಿಷಯಗಳನ್ನು ಚರ್ಚಿಸಿ ಬಗೆಹರಿಸಿಕೊಂಡರು.ಇದೇ ಸಂಧರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ಯೋಗೀಶ್, ಸಿದ್ದಗಂಗಯ್ಯ, ಸಿದ್ದರಾಮಣ್ಣ ಗ್ರಾಮ ಪಂಚಾಯಿತಿ ಸದಸ್ಯರಾದ ದೀಲಿಪ್ ಕುಮಾರ್, ರವೀಶ್, ಕಾಂತರಾಜು ,ಲೋಕೇಶ್ ,ಭವ್ಯ , ಸಿದ್ದಗಂಗಮ್ಮ ಕಲ್ಲೇಶ್, ಶೈಲಾಜ ಗಂಗಾಧರಯ್ಯ, ಶಿವಪ್ಪ, ಉಮಾ, ಭಾಗ್ಯಮ್ಮ, ಪಿಡಿಓ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.