ತಿ. ನರಸೀಪುರ: ಕಿರಗಸೂರು ಗ್ರಾಮ ಪಂಚಾಯಿತಿಗೆನಡದ ಚುನಾವಣೆಯಲ್ಲಿ ನಿಂಗರಾಜು ರವರು ಒಂದು ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ ರುಕಿರಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಚಂದ್ರಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿನಿಂಗರಾಜು. ಮತ್ತು ಮಂಗಳಮ್ಮ ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದರು,ನಂತರ ನೆಡದಚುನಾವಣೆಯಲ್ಲಿ 9 ಮತಗಳ ಪಡೆದು ಸಿ.ನಿಂಗರಾಜು ಅಧ್ಯಕ್ಷರಾಗಿ ಆಯ್ಕೆಯಾದರೆ 8 ಮತಗಳ ಪಡೆದು ಮಂಗಳಮ್ಮ ಸೋಲು ಕಂಡರು.
ನೂತನ ಅಧ್ಯಕ್ಷ ನಿಂಗರಾಜು ಮಾತನಾಡಿ ಅಧ್ಯಕ್ಷರಾಗಿ ಚುನಾಯಿಸಿದ ಎಲ್ಲಾ ಸದಸ್ಯರಿಗೂ ನನ್ನ ಗೆಲುವಿಗೆ ಶ್ರಮಿಸಿದ ಮುಖಂಡರಿಗೂ ಹಿತೈಷಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ, ಚುನಾವಣೆವರೆಗೆ ಮಾತ್ರ ಪರ ವಿರೋಧವಿತ್ತು ಮುಂದೆ ನಾವೇಲ್ಲ ಒಂದೇ ನನ್ನ ಪರ ಮತಚಲಾಯಿ ಸಿದವರು ಹಾಗೂ ನನ್ನ ವಿರೋಧ ಮಾಡಿದ ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪಂಚಾಯತಿ ವ್ಯಾಪ್ತಿಯಲ್ಲಿ ಜನರಿಗೆ ಮೂಲಸೌಕರ್ಯಗಳಾದ. ಸ್ವಚ್ಛತೆ, ಕುಡಿಯುವ ನೀರು ಬೀದಿದೀಪ,ಶಿಕ್ಷಣ. ಆರೋಗ್ಯ. ಚರಂಡಿ ಇವುಗಳಿಗೆ ಮೊದಲಾದತ್ಯ ನೀಡುತ್ತೇವೆ ಎಂದರು.ಚುನಾವಣೆ ಅಧಿಕಾರಿಯಾಗಿ ವಿಸಿನಾಲೆ ಸಹಯಕ ಕಾರ್ಯ ಪಾಲಕ ಅಭಿಯಂತ್ರರಾದ ಮಂಜುನಾಥ್ ಕರ್ತವ್ಯನಿರ್ವಹಿಸಿದರು,ಅಧ್ಯಕ್ಷರಾಗಿ ನಿಂಗರಾಜು ಆಯ್ಕೆಯಾಗುತ್ತಿದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣೆ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷೆ ಚಂದ್ರಮ್ಮ ಸದಸ್ಯರುಗಳಾದ ಜ್ಯೋತಿ, ನಾಗರಾಜು, ಭಾಗ್ಯ, ಶಿವರಾಜ್, ಚಿನ್ನತಾಯಮ್ಮ,ಗಿರಿಜಮ್ಮ,ಮಹೇಶ್, ರಾಜೇಶ್ವರಿ, ನಾಗರಾಜು, ಸರೋಜಮ್ಮ, ಮಹದೇವಸ್ವಾಮಿ,ಗಿರೀಶ್, ಕಾಮಿನಿ, ನಾಗರತ್ನಮ್ಮ, ಪಿ ಡಿ ಓ ಧರಣೇಶ್ ಹಾಗೂ ಮುಖಂಡಗಳಾದ ಕಸಬಾ ಪಿಸಿಸಿ. ಅಧ್ಯಕ್ಷ ಮಲ್ಲಣ್ಣ, ಕಾಂತರಾಜು, ಸೀನಪ್ಪ, ವಸಂತ ಗುತ್ತಿಗೆದಾರ ಬಸವರಾಜು, ಮಹದೇವಯ್ಯ, ರವಿ,ಪ್ರಕಾಶ್, ಮಲಿಯೂರು ಶಂಕರ್, ಬನ್ನೂರು ಪುರಸಭೆ ಸದಸ್ಯ ಶಿವಣ್ಣ, ಗುತ್ತಿಗೆದಾರ ಮಂಟಲಿಂಗಪ್ಪ. ನಾಗರಾಜು, ಮುಂತಾದವರು ಹಾಜರಿದ್ದರು.