ಬೇಲೂರು: ಮಳೆಯಿಂದಾಗಿ ಕಳೆದ ಕೆಲ ದಿನಗಳಿಂದ ಬಿಕೋ ಎನುತಿದ್ದ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದರಿಂದ ದೇಗುಲ ದಲ್ಲಿ ಜನ ಜಂಗುಳಿ ತುಂಬಿತ್ತು.
ಎರಡು ದಿನಗಳ ರಜೆ ಹಾಗೂ ಕಳೆದ ಒಂದು ವಾರದಿಂದ ಬಿಟ್ಟೂ ಬಿಟ್ಟೂ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಬೇಲೂರಿಗೆ ಪ್ರವಾಸಿಗರ ಹಾಗೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಇನ್ನೇನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು ಅಷ್ಟರೊಳಗೆ ದೇಗುಲಕ್ಕೆ ಬಂದು ಹೋಗುವು ದಕ್ಕಾಗಿ ಸಾಕಷ್ಟು ಜನರು ಬಂದಿದ್ದರಿಂದ ಚನ್ನಕೆಶವಸ್ವಾಮಿ ದೇಗುಲದ ಒಳ ಮತ್ತು ಹೊರ ಆವರಣ ಪ್ರವಾಸಿಗರ ಮತ್ತು ಭಕ್ತರಿಂದ ತುಂಬಿ ತುಳುಕುತಿತ್ತು.
ದೇವಸ್ಥಾನದ ಮುಂಬಾಗದ ಅಂಗಡಿ ಮುಂಗಟ್ಟು, ಹೋಟೆಲ್ ಗಳಲ್ಲಿ ಜನ ಜಂಗುಳಿಯಿಂದ ತುಂಬಿದ್ದು ಕಾಣಬಹುದಾಗಿತ್ತು. ದೇಗುಲಕ್ಕೆ ಆಗಮಿಸಿದ ಪ್ರವಾಸಿಗರಲ್ಲಿ ಸಾಕಷ್ಟು ಜನರು ದೇಗುಲದ ಶಿಲ್ಪ ಸೌಂದರ್ಯವನ್ನು ಕುಟುಂಬ ಸಮೇತ ವೀಕ್ಷಿಸು ತಿದ್ದರು.ಪ್ರವಾಸಿಗರು ಹೆಚ್ಚು ವಾಹನಗಳಲ್ಲಿ ಬಂದಿದ್ದರಿಂದ ದೇವಸ್ಥಾನದ ಹಿಂಬಾಗದ ವಾಹನಗಳ ನಿಲುಗಡೆ ಸ್ಥಳ ಭರ್ತಿ ಯಾಗಿ ಇತರೆ ವಾಹನಗಳನ್ನು ನಿಲ್ಲಿಸಲು ಸ್ಥಳ ಸಾಕಾಗದೆ ಪ್ರವಾಸಿಗರು ತಮ್ಮ ವಾಹನಗಳನ್ನು ದೇಗುಲ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲೂ ಹಾಗೂ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದರಿಂದ ವಾಹನ ದಟ್ಟಣೆ ಉಂಟಾಗಿ ಸ್ಥಳೀಯರು ಸೇರಿದಂತೆ ವಾಹನ ಗಳ ಸವಾರರು ಪರದಾಡುವಂತಾಗಿತ್ತು.
ಏನೇ ಆದರೂ ಕಳೆದ ಕೆಲ ದಿನಗಳಿಂದ ಬೆರಳೆಣಿಕೆ ಜನರಿಂದ ಕೂಡಿರುತ್ತಿದ್ದ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮಾತ್ರ ಸಹಸ್ರಾರು ಜನ ಪ್ರವಾಸಿಗರು ಹಾಗೂ ಭಕ್ತರಿಂದ ತುಂಬಿದ್ದರಿಂದ ದೇಗುಲದೊಳಕ್ಕೆ ಹೋಗಲು ಒಂದು ರೀತಿಯಲ್ಲಿ ಹರ್ಷವಾಗುತಿತ್ತು. ಆದರೆ ಪಟ್ಟ ಣದ ಮುಖ್ಯರಸ್ತೆಯಲ್ಲಿ ವಾಹನ ಗಳ ಸಂಖ್ಯೆ ಹೆಚ್ಚಾದ್ದರಿಂದ ವಾಹನಗಳು ಮುಖ್ಯರಸ್ತೆ ದಾಟುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳ ಬೇಕಾಗಿತ್ತು. ಇದರಿಂದ ದೂರದೂರಿಗೆ ಮತ್ತು ತುರ್ತಾಗಿ ತೆರಳುವವರಿಗೆ ಸ್ವಲ್ಪ ತೊಂದರೆ ಯಾಗಿದ್ದು ಕಾಣಬಹುದಾಗಿತ್ತು.