ಬೊಮ್ಮನಹಳ್ಳಿ: 25 ವರ್ಷಗಳ ವಿದ್ಯಾರ್ಥಿ ಜೀವನದ ಸವಿ ಸವಿ ನೆನಪುಗಳನ್ನು ಮತ್ತೆ ನಮ್ಮ ಕಣ್ಣುಮುಂದೆ ಕುಣಿದಾಡಿವೆ ಎಂಬುದಾಗಿ ಗುರುವಂದಾನ ಕಾರ್ಯಕ್ರಮದ ಮುಖಂಡರಾದ ಮಲ್ಲಾರೆಡ್ಡಿ ಮಂಜುನಾಥ್ ತಿಳಿಸಿದರು.
ಸಿಂಗಸಂದ್ರ ವಾರ್ಡ್ನ ಚನ್ನಕೇಶವ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 1997-1998 ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದಾನ ಹಾಗೂ 25 ನೇ ವರ್ಷದ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಎದೆಯೊಳಗೆ ಅಚ್ಚೊತ್ತಿದ ನೆನಪು: ಪ್ರಾಥಮಿಕ ಶಾಲೆಯ ಕಲಿಕೆಯ ವಿದ್ಯಾರ್ಥಿ ಜೀವನದಲ್ಲಿ ಮೊದಲು ಅ ಆ ಇ ಈ ,ಕಾಗುಣಿತ, ಮಗ್ಗಿ ಲೆಕ್ಕ ಕಲಿಸಿ ಗುರುಗಳು, ಬೆತ್ತದಿಂದ ತಿಂದ ಪೆಟ್ಟು, ಕುಂಟೆಬಿಲ್ಲೆ, ಜೂಟಾಟ, ಲಗೋರಿ, ಕಬಡ್ಡಿ ಆಟಗಳಲ್ಲಿ ಬಿದ್ದಿ ಗಾಯಮಾಡಿಕೊಂಡು ,ಅಳುತ್ತಿದ್ದ ನೆನಪು, ಸ್ಲೇಟ್ , ಹಿಡಿದು ಹೊಡೆದಾಡಿದ ,ಕಿತ್ತಾಟ,ತುಂಟಾಗ ,ಕಿವಿಹಿಂಡಿ, ಜುಟ್ಟು ಹಿಡಿದು ಒದೆ ಕೊಟ್ಟ ಮೇಷ್ಟ್ರು, ಬೆಂಚ್ ಮೇಲೆ ನಿಲ್ಲಿದ ದಿನಗಳು, ಈ ಎಲ್ಲಾ ಸವಿನೆನಪಿಗಾಗಿ ಇಂತಹ ಸುಮಧುರ ಕ್ಷಣಗಳನ್ನು ನಾವು ನೋಡುತ್ತಿದ್ದಿವಿ ಎಂಬುದೇ ಏನೋ ಒಂಥರ ಖುಷಿ ಮತ್ತು ಆನಂದವನ್ನು ಉಂಟು ಮಾಡುತ್ತಿದೆ ಎಂದರು
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಗೋಪಾಲರೆಡ್ಡಿ ಮಾತನಾಡುತ್ತ ಗುರು ಶಿಷ್ಯರ ಪುನರ್ಮಿಲನ ಸುಂದರ ಕಾರ್ಯಕ್ರಮವು ಬಹಳ ಸಂತೋಷವನ್ನು ನೀಡುತ್ತಿದೆ, 25 ವರ್ಷಗಳ ವಿದ್ಯಾರ್ಥಿಗಳನ್ನು ಒಂದೇ ಕಡೆ ಹಾಗೂ 25 ವರ್ಷದ ಒಡನಾಡಿ ಶಿಕ್ಷಕರನ್ನು ನೋಡುವ ಹಾಗೂ ಪರಸ್ಪರ ಯೋಗ ಕ್ಷೇಮಗಳನ್ನು ಮಾತನಾಡುವ ಸವಿ ನೆನಪುಗಳನ್ನು ಮೆಲುಕು ಹಾಕುವ ಸುಸಂದರ್ಭ ಹೆಮ್ಮೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ,ಶಿಷ್ಯರು ಕಾಲಿಗೆ ಬಿದ್ದು ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕರಾದ ಗೋಪಾಲರೆಡ್ಡಿ, ಸಿ.ನರಸಿಂಹಪ್ಪ, ಸೈಯದ್ ಅಹಮದ್ ಖಾನ್, ಶಾರದಮ್ಮ, ಶಿವಶಂಕರ್ ರೆಡ್ಡಿ, ನಂಜಮ್ಮ, ಧನಲಕ್ಷ್ಮೀ, ಮಂಜುಳಾ, ಶೈಲಜಾ,,ರಾಮಚಂದ್ರ, ಕೃಷ್ಣಮೂರ್ತಿ, ಇನ್ನೂ ಮುಂತಾದ ಗುರುಗಳು ಸೇರಿದಂತೆ ವಿದ್ಯಾರ್ಥಿಗಳಾದ ಮಲ್ಲಾರೆಡ್ಡಿ ಮಂಜುನಾಥ್, ಈರೇಗೌಡ, ಮುರಳಿ, ಕೆ.ಕೆ.ಮಂಜು, ಲೋಕೇಶ್, ಪುಷ್ಪಲತಾ, ಅಂಭಭವಾನಿ, ಮೈನಾವತಿ, ಗುಣವತಿ, ದಿನೇಶ್, ರವಿ, ಅಂಬರೀಶ್, ಮಂಜುನಾಥ್, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಮಕ್ಕಳೊಂದಿಗೆ ಜೊತೆಗೂಡಿ ಭರತನಾಟ್ಯ ನೃತ್ಯ, ಹಾಡು ಮನೋರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.