ಬೆಂಗಳೂರು: ಶೀಘ್ರದಲ್ಲಿಯೇ ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಲು ಇಂಗಿತ ವ್ಯಕ್ತಪಡಿಸಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ದೆಹಲಿಯಲ್ಲಿ ಕೇಂದ್ರಸಚಿವ ಜೆಡಿಎಸ್ನ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ತಾವು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕಾದರೆ, ನೀವು ಏನೇನು ಮಾಡಬೇಕು ಎಂದು ಪಟ್ಟಿ ನೀಡಿದ್ದಾರೆ ಎಂದು ಹೇಳಲಾಗಿದೆ.ಪಟ್ಟಿಯಲ್ಲಿರುವ ಅಂಶಗಳ ವಿವರ ಇಂತಿದೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ನಾನು ಅಭ್ಯರ್ಥಿ ಆಗುತ್ತೇನೆ., ನನಗೆ ಯಾವುದೇ ಮುಜುಗರವಿಲ್ಲ.,3. ಆದ್ರೆ, ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ, ತೆನೆಹೊತ್ತ ಮಹಿಳೆ ಚಿಹ್ನೆಯಡಿಯಲ್ಲಿ ಸ್ಫರ್ಧೆ ಮಾಡುವುದಿಲ್ಲ.,
ನಾನು ಈಗಿರುವ ಬಿಜೆಪಿ ಪಕ್ಷದಲ್ಲಿಯೇ ಇರುತ್ತೇನೆ., ಬಿಜೆಪಿಯಿಂದಲೇ ಸ್ಫರ್ಧೆ ಮಾಡುತ್ತೇನೆ., ತಾವು ಇದಕ್ಕೆ ಸಹಕರಿಸಬೇಕು., ಜೊತೆಗೆ ಉಪ-ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸಬೇಕು., ಎರಡು ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರನ್ನು ನಿಮ್ಮ ಸಮ್ಮುಖದಲ್ಲಿ ಒಟ್ಟಿಗೆ ಕೊಂಡ್ಯೊಯ್ಯಬೇಕು., ಇಷ್ಟು ಮಾತ್ರವಲ್ಲದೇ ನೀವು ನಿಮ್ಮ ಸಮಯವನ್ನು ನನ್ನ ಗೆಲುವಿಗಾಗಿ ಮೀಸಲಿಡಬೇಕು., ಇದರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಕ್ಷೇತ್ರದಲ್ಲಿ ಓಡಾಟ ಮಾಡಿ ಗೆಲುವಿಗಾಗಿ ಶ್ರಮಿಸಬೇಕು. ಹೀಗೆ ಸಾಲು ಸಾಲು ವಿಚಾರಗಳನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.