ಉತ್ತರ ಪ್ರದೇಶ: ಹತ್ತನೇ ತರಗತಿ ವಿದ್ಯಾರ್ಥಿನಿ ಚ: ಲಿಸುತ್ತಿರುವ ರೈಲಿನ ಎದುರು ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಗಜರೌಲಾ ಪಟ್ಟಣದ ಆವಂತಿಕಾ ನಗರದ ನಿವಾಸಿಯಾಗಿದ್ದಳು. ಶುಕ್ರವಾರ ಬೆಳಿಗ್ಗೆ ಶಾಲೆಗೆ ತೆರಳಲು ಮನೆಯಿಂದ ಹೊರಟವನು ಶವವಾಗಿ ಪತ್ತೆಯಾಗಿದ್ದಾಳೆ. ಭಾನ್ಪುರ್ ಬಳಿ ಓಡುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾಳೆ.
ಚಲಿಸುತ್ತಿರುವ ರೈಲಿನ ಎದುರು ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹಾದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಗಜರೌಲಾ ಪಟ್ಟಣದ ಆವಂತಿಕಾ ನಗರದ ನಿವಾಸಿಯಾಗಿದ್ದಳು. ಶುಕ್ರವಾರ ಬೆಳಗ್ಗೆ ಶಾಲೆಗೆ ತೆರಳಲು ಮನೆಯಿಂದ ಹೊರಟವಳು ಶವವಾಗಿ ಪತ್ತೆಯಾಗಿದ್ದಾಳೆ. ಭಾನ್ಪುರ್ ಬಳಿ ಓಡುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾಳೆ.
ಅಲ್ಲೇ ಓಡಾಡುತ್ತಿದ್ದವರು ಈ ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರ್ಪಿಎಫ್ ಮತ್ತು ಜಿಆರ್ಪಿ ತಂಡಗಳು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಆರ್ಪಿ ಔಟ್ಪೋಸ್ಟ್ ಇನ್ಚಾರ್ಜ್ ಗಜ್ರೌಲಾ ರಾಜೀವ್ ಸಿಂಗ್ ತಿಳಿಸಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.