ಚಳ್ಳಕೆರೆ: ಚಳ್ಳಕೆರೆಯ ಯುವಕರು ಹಾಗೂ ನಗರದ ದಾನಿಗಳ ನೆರವಿ ನಿಂದ ಸಂಗ್ರಹಿಸಲಾದ, ದಿನ ಬಳಕೆ ವಸ್ತುಗಳನ್ನು ಕೇರಳದ ವೈನಾಡು ಮಳೆ ಪ್ರವಾಹ ಪೀಡಿ ತರಿಗೆ, ನೆರವಿನ ಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ನಗರಸಭೆ ಸದಸ್ಯರಾದ ಟಿ.ಮಲ್ಲಿಕಾರ್ಜುನಾ ಹಾಗೂ ಪ್ರಶಾಂತ್ ಕುಮಾರ್ (ಪಚ್ಚಿ) ನೇತೃತ್ವದಲ್ಲಿ ನಗ ರದ ವಿವಿಧ ದಾನಿಗಳಿಂದ ಸಂಗ್ರಹಿಸಲಾದ, ಔಷಧಿ, ಬಟ್ಟೆ, ಅಕ್ಕಿ, ಬೆಳೆ, ಎಣ್ಣೆ, ಹಾಗೂ ಅಡಿಗೆ ದಿನಸಿಗಳು ಸೇರಿ ದಂತೆ, ಪಾದರಕ್ಷೆಗಳನ್ನು, ಪ್ರವಾಹ ಪೀಡಿತರಿಗೆ ಕೊಟ್ಟ ವಸ್ತುಗಳನ್ನು, ಟಾಟಾ ಎಸಿ ವಾಹನದಲ್ಲಿ ಕೇರಳದ ವೈನಾಡಿಗೆ ತೆರಳುವ ಮುನ್ನ ಧಾನಿಗಳಾದ ನವೀನ್ ಹಾ ಗೂ ಕೆಂಗ ಸೂರಿ,ರಂಜಿತ್ ಕುಂಚುಮ್ ಅವರು ಕನ್ನಡ ಬಾವುಟ ವನ್ನು
ತೋರಿಸಿ. ವಾಹನದ ತಂಡವನ್ನು ಬೀಳ್ಕೊಟ್ಟರು.
ಕೇರಳದ ವೈನಾಡಿಗೆ ತೆರಳಿದ ತಂಡದಲ್ಲಿ ನಗರಸಭಾ ಸದಸ್ಯ ಪ್ರಶಾಂತ್ ಕುಮಾರ್ (ಪಚ್ಚಿ) ಸೈಯದ್ ನಬಿ, ವಾಸಿಮ್, ಫೈಜಾನ್ ಇತರರು ಇದ್ದರು.ಕೇರಳ ಸರ್ಕಾರಕ್ಕೆ ಸಾಮಗ್ರಿಗಳನ್ನು ಹಸ್ತಾಂತರ ಮಾಡಿದರು.ವಿಶೇಷ ವೆಂದರೆ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮ ದ ಮನೆ ಮಗಳು ವೈನಾಡಿನ ಜಿಲ್ಲಾಧಿಕಾರಿಗಳಾಗಿ ಇರುವುದು.